ರೌಡಿಶೀಟರ್ ನಿಂದ ಮನೆ ನೆಲಸಮ: ಬೀದಿಗೆ ಬಿದ್ದ ಕುಟುಂಬ

ರೌಡಿ ಲಾಜರಸ್

ಕಲ್ಲಮ್ಮ ಪೂಜಾರ್

ಧಾರವಾಡ:ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ‌ ರೌಡಿ ಶೀಟರ್ ವೊಬ್ಬ ಮನೆಯೊಂದನ್ನು ನೆಲ‌ಸಮ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. 

ನಗರದ ಕೆಲಗೇರಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಅವಳಿ ನಗರದ ಕುಖ್ಯಾತ ರೌಡಿ ಲಾಜರಸ್ ಅನ್ನೋ ರೌಡಿಯೇ ಈ ಕೆಲಸ ಮಾಡಿದ್ದಾನೆ. 

ಸುಮಾರು ಒಂದು ಗುಂಟೆ ಜಾಗದಲ್ಲಿದ್ದ ಮನೆಯನ್ನು ನಗರದ ಕಲ್ಲಮ್ಮ ಪೂಜಾರ್ ಅನ್ನೋ ಮಹಿಳೆ ಖರೀದಿಸಿದ್ದರು. ಪಕ್ಕದಲ್ಲಿ ಕೊಂಚ ಖಾಲಿ ಜಾಗೆಯೂ ಇತ್ತು. ಅದನ್ನ ಕಲ್ಲಮ್ಮ ಲಾಜಲಸ್ ಗೆ ಮಾರಾಟ ಮಾಡಿದ್ದರು. ಆದರೆ‌ ಕೆಲ ತಿಂಗಳು ಕಳೆದ ಬಳಿಕ ಲಾಜರಸ್ ಆ ಮನೆಯೂ ತನ್ನದೇ,‌ಅದನ್ನ ಖರೀದಿಸಲಾಗಿದೆ ಅಂತಾ ಹೇಳಿ ಕಲ್ಲಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಕೂಡಲೇ ಮನೆ ಖಾಲಿ ಮಾಡುವಂತೆ ದುಂಬಾಲು ಬಿದ್ದಿದ್ದಾನೆ. ಆದರೆ ಕಲ್ಲಮ್ಮ ಮನೆ ಖಾಲಿ ಮಾಡಲು ನಿರಾಕರಿಸಿದ್ದಾರೆ. ಯಾವಾಗ ಕಲ್ಲಮ್ಮ ಮನೆ ಖಾಲಿ ಮಾಡೋದಿಲ್ಲ ಅಂದರೋ ಸಿಟ್ಟಿಗೆದ್ದ ರೌಡಿ ಲಾಜರಸ್, ಹತ್ತಾರು ಬೆಂಬಲಿಗರೊಂದಿಗೆ ಬಂದು ಹಲ್ಲೆ ಮಾಡಿದ್ದಲ್ಲದೆ ಮಹಿಳೆಗೆ ಹಗ್ಗ ಕಟ್ಟಿ ಬಾವಿಗೆ ಬಿಟ್ಟಿದ್ದನಂತೆ. ಬಳಿಕ ಜೆಸಿಬಿ ತಂದು ಮನೆಯನ್ನು ನಿನ್ನೆ ಸಾಯಂಕಾಲ ನೆಲಸಮ ಮಾಡಿದ್ದಾನೆ. ಇದರಿಂದಾಗಿ ಕಲ್ಲಮ್ಮ ಕುಟುಂಬ ಇದೀಗ ಬೀದಿಗೆ ಬಿದ್ದಿದೆ.

Leave a Reply

Your email address will not be published.