ಪಕ್ಷದಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ: ಮೋಟಮ್ಮ ಎದುರು ಕಾರ್ಯಕರ್ತೆ ಅಳಲು


ಧಾರವಾಡ: ಕಾಂಗ್ರೆಸ್ ನಲ್ಲಿ ಹೆಣ್ಣು ಮಕ್ಕಳಿಗೆ ಗೌರವ ಇಲ್ಲ. ಪಕ್ಷದಲ್ಲಿ ಮಹಿಳೆಯರನ್ನು ತುಚ್ಛವಾಗಿ ಕಾಣುತ್ತಾರೆ ಎಂದು ಕಾ ಮಾಜಿ ಸಚಿವೆ ಮೋಟಮ್ಮ ಎದುರು ಕೈ ಕಾರ್ಯಕರ್ತೆಯೊಬ್ಬರ ಅಳಲು ತೊಡಿಕೊಂಡಿದ್ದಾರೆ.

ನಗರದ ವಿದ್ಯಾವರ್ಧಕ‌ ಸಂಘದಲ್ಲಿ  ಭಾನುವಾರ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿರುವ ‘ಚುನಾವಣೆ: ಒಳ ಹೊರಗೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. 

ಕಾಂಗ್ರೆಸ್ ಕಾರ್ಯಕರ್ತೆ ಪಕ್ಷದಲ್ಲಿ ನಮ್ಮ ನಾಯಕರ ಪರವಾಗಿ ಕೆಲಸ ಮಾಡುವಾಗ ಕೀಳಾಗಿ ನೋಡುತ್ತಾರೆ. ನಮ್ಮ ಕಷ್ಟ ಕೇಳೋರಾರು? ಎಂದು  ಕಾಂಗ್ರೆಸ್ ನಾಯಕಿ ಮೋಟಮ್ಮಗೆ ಕಾರ್ಯಕರ್ತೆ ಅನಿತಾ ಗುಂಜಾಳ ಪ್ರಶ್ನಿಸಿದ್ದಾರೆ.

ಪಕ್ಷಕ್ಕಾಗಿ ನಾವು ಹಗಲು-ರಾತ್ರಿ ದುಡಿದಿದ್ದೇವೆ. ಮನೆ ಕೆಲಸ‌ ಮಾಡಿ, ಬಳಿಕ ಪಕ್ಷದ ಕೆಲಸವನ್ನೂ ಮಾಡುತ್ತೇವೆ. ರಾತ್ರಿ ಹನ್ನೆರಡವರಗೆ ನಾವು ಪ್ರಚಾರ ಮಾಡುತ್ತೇವೆ. ಇಷ್ಟಾದರೂ ನಮಗೆ ಪಕ್ಷದಲ್ಲಿ ಗೌರವ, ಸ್ಥಾನಮಾನ ಇಲ್ಲ.ನಾಯಕರಿಗೆ ನಮ್ಮ ನೆನಪಾಗೋದು ಪ್ರಚಾರದ ವೇಳೆಯಷ್ಟೇ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ನಮಗೆ ಸಾಕಷ್ಟು ಸಮಸ್ಯೆಯಾಗಿವೆ. ಪಕ್ಷದ‌ ಮುಖಂಡನೊಬ್ಬ ನನ್ನ ಮೈ ಮುಟ್ಟಲು ಬಂದಿದ್ದ ನಾನು ವಿರೋಧಿಸಿದಾಗ ಕ್ಷಮೆ ಕೇಳಿದ ಇಂಥ‌ ವೇಳೆ ನಾವು ಏನು ಮಾಡಬೇಕು? ಸೂಕ್ತ ಗೌರವ,‌ ಸ್ಥಾನಮಾನ ಕೊಡಿ ಅಂದರೆ ನೀವು ಗ್ಲಾಮರಸ್ ಆಗಿರಬೇಕು ಅಂತಾರೆ. ಗ್ಲಾಮರಸ್ ಅಂದರೆ‌ ಏನರ್ಥ?ಗ್ಲಾಮರಸ್‌ ಇದ್ದವರು ಗೆಲ್ತಾರೆ ಅಂತಾ ಹೇಳಲಾಗುತ್ತೆ. ಇದನ್ನ ಕೇಳಿ ನನ್ನ ಎದೆ ಝಲ್ ಅಂದಿದೆ. ಇಂದಿರಾಗಾಂಧಿ ಗ್ಲಾಮರಸ್‌ ಆಗಿದ್ದರಾ? ಕಿತ್ತೂರು ಚೆನ್ನಮ್ಮ, ಒನಕೆ‌ ಓಬವ್ವ ಗ್ಲಾಮರಸ್‌ ಆಗಿದ್ದರಾ?ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಅಂತಾ ಕಾರ್ಯಕರ್ತೆ ಅನಿತಾ  ಮೋಟಮ್ಮಗೆ ಮನವಿ ಮಾಡಿದರು.

Leave a Reply

Your email address will not be published.