ಕನ್ನಡ ಶಾಲೆಗಳನ್ನು ಮುಚ್ಚಬೇಡಿ ಎಂದು ರಕ್ತದಲ್ಲಿ ಮನವಿ ಪತ್ರ


ಧಾರವಾಡ: ವಿಲೀನದ ಹೆಸರಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಲು ಹೊರಟ ಸರಕಾರದ ಕ್ರಮವನ್ನು ವಿರೋಧಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ರಕ್ತದಲ್ಲಿ ಮನವಿ ಪತ್ರ ಸಲ್ಲಿಸಿದರು.

ವಿದ್ಯಾರ್ಥಿಗಳ ಕೊರತೆ ನೆಪದಲ್ಲಿ ರಾಜ್ಯದ ಸುಮಾರು 28 ಸಾವಿರ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ವಿಲೀನದ ಹೆಸರಲ್ಲಿ ಮುಚ್ಚಲು ಹೊರಟ ನವ ನಿರ್ಮಾಣ ಸೇನೆ ಕಾರ್ಯಕರ್ತರು ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಸರಕಾರದ ವಿರುದ್ದ ಘೋಷಣೆ ಕೂಗಿದ ಕಾರ್ಯಕರ್ತರು ರಕ್ತದಲ್ಲಿ ಮನವಿ ಪತ್ರ ಬರೆದು ಸರಕಾರದ ನಿಲುವನ್ನು ಖಂಡಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಮಾಧ್ಯಮ ವಾಗಿ ಕಲಿಸುವುದುಬೇಡ. ಒಂದು ಭಾಷೆಯಾಗಿ ಕಲಿಸಿ ಎಂದು ಕಳೆದ ಹಲವು ವರ್ಷಗಳಿಂದ ನವನಿರ್ಮಾಣ ಸೇನೆ ಸೇರಿದಂತೆ ನಾಡುನ ಹೋರಾಟಗಾರರು, ಸಾಹಿತಿಗಳು, ಚಿಂತಕರು ಸರಕಾರವನ್ನು ಒತ್ತಾಯಿಸುತ್ತಲೆ ಬದಿದ್ದಾರೆ. ಆದರೂ ಸರಕಾರ ಇದೇ ಶೈಕ್ಷಣೀಕ 1 ಸಾವಿರ ಇಂಗ್ಲೀಷ ಮಾಧ್ಯಮ ಶಾಲೆಗಳನ್ನು ಪ್ರಾರಂಬಿಸುವುದಾಗಿ ಘೋಷಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸಿ ಕಚೇರಿಯಲ್ಲಿ ಕುಳಿತು ವರದಿ ತಯಾರಿಸುವ ಐಎಎಸ್‌ ಅಧಿಕಾರಿಗಳ ಮಾತು ನಂಬಿ ಇಂತಹ ಮೂರ್ಖ ತೀರ್ಮಾನಕ್ಕೆ ಬರಬೇಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆಗ್ರಹಿಸಿದರು.

ಈ ಕೂಡಲೇ ಹೊರಡಿಸಿರು ಆದೇಶವನ್ನು ರದ್ದು ಪಡಿಸಿ ಇಂಗ್ಲೀಷ್ ಭಾಷೆಯಾಗಿ ಕಲಿಸುವ ತೀರ್ಮಾನ ಘೋಷಿಸಬೇಕು ಮತ್ತು ವಿಲೀನದ ಹೆಸರಲ್ಲಿ ೨೮ ಸಾವಿರ ಶಾಲೆಗಳನ್ನು ಮುಚ್ಚಲು ಮಾಡಿರುವ ಆದೇಶವನ್ನು ತಕ್ಷಣ ಮರಳಿ ಪಡೆಯುವಂತೆ ಆಗ್ರಹಿಸಿದರು.

Leave a Reply

Your email address will not be published.