ಗುತ್ತಿ ಬಸವಣ್ಣ ನೀರಾವರಿ ಯೋಜನೆ ಕಳಪೆ ಕಾಮಗಾರಿ: ಕೇಳುವವರಿಲ್ಲ ರೈತರ ಗೋಳು..!


ಇಂಡಿ: ಈ ಭಾಗದ ರೈತಾಪಿ ಸಮುದಾಯದ ಜೀವನಾಡಿಯಂತಿರುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಮಗಾರಿಯು ಬಹುತೇಕ ಕೆಳಪೆಯಿಂದ ಕೂಡಿದ್ದು. ಇದಕ್ಕೆ ಉಸ್ತುವಾರರಿಲ್ಲದೇ ನಡೆಯುವ ಕಾಮಗಾರಿಯನ್ನು ಕೃಷ್ಣಾ ಮೇಲ್ದಂಡೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದಾ ಮೇಘರಾಜನ ಅವಕೃಪೆ. ಕೈ ಕೊಡುವ ಮುಂಗಾರು, ಹೀಗೆ ಹತ್ತು ಹಲವಾರು ಸಮಸ್ಯೆಗಳ ಮಧ್ಯೆ ಸಂಕಷ್ಟಮಯ ಬದುಕನನು  ಒಡಲಿಗಂಟಿಸಿಕೊಂಡು ಸಂಕಷ್ಟದಲ್ಲಿ ಬದುಕುತ್ತಿರುವ ರೈತರು ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಬಗ್ಗೆ ನೂರಾರು ಹೊಂಗನುಸಗಳನ್ನು ಹೆಣೆದುಕೊಂಡಿದ್ದಾರೆ. ಆದರೆ ಮಂದ ಹಾಗೂ ಕೆಳಪೆ ಕಾಮಗಾರಿಯಿಂದ ಸಾಗಿರುವ ಈ ಕಾಲುವೆ ಬಗ್ಗೆ ರೈತರ ಆಕ್ರೋಶ ಮುಗಿಲು ಮುಟ್ಟಿದ್ದರೂ ಕೂಡಾ ಯಾವೊಬ್ಬ ಅಧಿಕಾರಿಯೂ ಕ್ರಮ ಕೈಗೊಳ್ಳದಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ.

ಉದ್ದೇಶಿತ 175 ಕಿ.ಮೀ. ಕಾಲುವೆಯ ಕಾಮಗಾರಿಗಾಗಿ ಸರಕಾರ ಸಾವಿರಾರು ಕೋಟಿ ರೂ.ಗಳು ವ್ಯಯಿಸುತ್ತಿದೆ.  ಉದ್ದೇಶಿತ ಯೋಜನೆಗೆ ಮೀಸಲಿಟ್ಟ ಅನುದಾನದ ಶೇ.50 ರಷ್ಟು ಕಾಮಗಾರಿ ಮುಗಿಸಿ ಕೊಡಲಾಗುವುದು ಎಂದು ಗುತ್ತಿಗೆದಾರರು ಹೇಳುತ್ತಾರೆ.
ಆದರೆ ಇಷ್ಟೆ ಮೊತ್ತದಲ್ಲಿ ಗುಣಮಟ್ಟದ ಕಾಮಗಾರಿ ಸಾಧ್ಯವಿಲ್ಲ. ಹೀಗಾಗಿ ಈ ಯೋಜನೆಯ ಅನುಷ್ಠಾನಕ್ಕಾಗಿ ದೊಡ್ಡ ಮಟ್ಟದಲ್ಲಿಯೇ ಭ್ರಷ್ಠಾಚಾರ ನಡೆದಿದೆ ಎಂದು ರೈತ ಮುಖಂಡರು ದೂರುತ್ತಾರೆ.

ಈ ಯೋಜನೆಯು ಶೇ. 60 ರಷ್ಟು ಪೂರ್ಣಗೊಂಡಿದೆ. ಆದರೆ ಗುತ್ತಿಗೆದಾರರು ಕಡಿಮೆ ಪ್ರಮಾಣದ ಸಿಮೆಂಟ್, ಮಣ್ಣು ಮಿಶ್ರಿತ ಉಸುಕು ಸತ್ವ ಇಲ್ಲದ ಖಡಿ ಬಳಸಿ ಕಾಮಗಾರಿ ನಿರ್ಜೀವಾಗುವಂತೆ ಮಾಡಿದ್ದಾರೆ. ಈ ಯೋಜನೆಗೆ ಗೊತ್ತು ಪಡಿಸಿದ ಗಾತ್ರ ಕಾಲುವೆ ಯಾವ ಭಾಗಕ್ಕೆ ಹೋದರು ದೊರೆಯುವದಿಲ್ಲ. ಹಾಗಾಗಿ ನೀರು ಬಿಟ್ಟ ಮೊದಲೆ ಬಾರಿಯೇ ತಳಪಾಯ ಕೊಚ್ಚಿ ಹೋಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ಬಹುತೇಕರಲ್ಲಿದೇ. ನಿರ್ಲಕ್ಷತನ ಹೀಗೆಯೆ ಮುಂದುವರೆದರೆ ಈ ಯೋಜನೆಯ ಉದೇಶವೆ ಹಾಳಾಗಲಿದೆ.

ಸರಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಕೇವಲ ಹಣ ಬಿಡುಗಡೆ ಮಾಡಿ ಕುಳಿತುಕೊಳ್ಳದೆ ಗೊತ್ತುಪಡಿಸಿದ ಗಾತ್ರದಲ್ಲಿಯೇ ಕಾಮಗಾರಿಯನ್ನು ತೆಗೆದುಕೊಳ್ಳಬೇಕು. ಕಾಮಗಾರಿ ಕೆಳಪೆತನದಿಂದ ಕೂಡಿರುವದು ಅಧಿಕಾರಿಗಳಿಗೂ ಗೊತ್ತಿದೆ. ಆದರೂ ಅವರು ಮೌನಕ್ಕೆ ಶರಣಾಗಿರುವುದು ಜಿಜ್ಞಾಸೆಗೆ ಕಾರಣವಾಗಿದೆ. ಇನ್ನೂ ಮುಂದಾದರೂ ಅಧಿಕಾರಿಗಳು ಕೂಡಲೇ ಗುಣಮಟ್ಟ ಪರಿಶೀಲಿಸಿ ಕ್ರಮ ಕೈಕೊಳ್ಳದಿದ್ದಲ್ಲಿ ಉಗ್ರ ಹೋರಾಟ ಕೈಕೊಳ್ಳಲಾಗುವುದು ಎಂದು ಈ ಭಾಗದ ರೈತ ಸಮೂಹ ಎಚ್ಚರಿಸಿದ್ದಾರೆ.

ಈ ಭಾಗದಲ್ಲಿ ರೈತರ ಕನಸುವಾಗುತ್ತಿರುವ ಗುತ್ತಿ ಬಸವಣ್ಣ ಯೋಜನೆಯು ಸಂಪೂರ್ಣವಾಗಿ ಕೆಳಪೆ ಮಟ್ಟದಾಗಿದೆ. ಆದರೆ ಈ ಯೋಜನೆಯ ಅನುದಾನವನ್ನು ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಅಭಿಯಂತರರು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಿದ್ದೇವೆ ಎಂದು ರೈತ ಮುಖಂಡ ಎಸ್. ಎಸ್. ಬಿರಾದಾರ ಉದಯನಾಡು ಗೆ ತಿಳಿಸಿದ್ದಾರೆ.

Leave a Reply

Your email address will not be published.