ಕರ್ನಾಟಕ ಒಡೆಯಬೇಡಿ ಎಂದ ಹೊರಟ್ಟಿ


ಹಾವೇರಿ: ಕರ್ನಾಟಕವನ್ನು ಇಬ್ಭಾಗ ಮಾಡುವದಕ್ಕೆ ತಮ್ಮ ಸಹಮತವಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಯಾಗುವುದು ಸರಿಯಲ್ಲ. ಅಖಂಡ ಕರ್ನಾಟಕದ ಪರಿಕಲ್ಪನೆಗೆ ತಮ್ಮ ಬೆಂಬಲವಿದೆ ಎಂದು ಹೊರಟ್ಟಿ ಹೇಳಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ವಾದಿಸುತ್ತಿರುವವರು ಬೇಕಿದ್ದರೆ ಒಂದೆಡೆ ಕುಳಿತು ಚರ್ಚೆ ನಡೆಸಲು. ಆದರೆ, ರಾಜ್ಯ  ಒಡೆಯುವ ಮಾತು ಬೇಡ ಎಂದ ಅವರು, ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉತ್ತರ ಕರ್ನಾಟಕದ ಎಲ್ಲ ಶಾಸಕರು, ಸಚಿವರ ಸಭೆ ನಡೆಸಲಿ ಎಂದೂ ಹೇಳಿದರು.

Leave a Reply

Your email address will not be published.