ಬೀಜ, ಗೊಬ್ಬರ ನೀಡಲು ಹಿಂದೇಟು: ಕೃಷಿ ಇಲಾಖೆ ಮುತ್ತಿಗೆ ಹಾಕಿದ ರೈತರು


ಇಂಡಿ: ಪಟ್ಟಣದ ಕೃಷಿ ಇಲಾಖೆ ಅಧಿಕಾರಿಗಳು ಸಕಾಲಕ್ಕೆ  ರೈತರಿಗೆ ಬೀಜ, ಗೊಬ್ಬರ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಕೃಷಿ ಇಲಾಖೆಯಲ್ಲಿ ಏಜೆಂಟ್ ಹಾವಳಿ ಹೆಚ್ಚಿದೆ ಇದರಿಂದ ರೈತರಿಗೆ ಸೌಲಭ್ಯ ದೊರೆಯುತ್ತಿಲ್ಲ ಎಂಬ ಎಂಬ ಆರೋಪ ಕೇಳಿಬಂದಿದೆ.

ಕಳೆದ ತಿಂಗಳು ತಾಲೂಕಿನಾದ್ಯಂತ ಉತ್ತಮ ಮೆಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಬೀಜ ಹಾಗೂ ಗೊಬ್ಬರ ಮುಂತಾದ ಪರಿಕರಗಳನ್ನು ಪಡೆಯಲು ಎಲ್ಲ ಕೆಲಸ ಬಿಟ್ಟು ಕೃಷಿ ಇಲಾಖೆ ಮುಂದೆ ಹಾಜರಿದ್ದರು ಕೂಡ ಸಮಯಕ್ಕೆ ಸರಿಯಾಗಿ ಅಧಿಕಾರಿಗಳು  ಸ್ಪಂದಿಸುತ್ತಿಲ್ಲ.

ಬೀಜ, ಗೊಬ್ಬರ ನೀಡಲು ಅಧಿಕಾರಿಗಳು ಲಂಚ ಬೇಡಿಕೆವೊಡ್ಡುತ್ತಿದ್ದಾರೆ.  ಏಜೆಂಟ್ ರ ಹಾವಳಿಯಿದ್ದು, ಕಾರ್ಡ್ ಇಲ್ಲದವರಿಗೂ ಹೆಚ್ಚಿನ ಹಣ ಪಡೆದು ಬೀಜ, ಗೊಬ್ಬರವನ್ನು ನೀಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಏಜೆಂಟ್ ಹಾವಳಿಗೆ ಬ್ರೇಕ್ ಹಾಕಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಶೀಘ್ರ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದರು.

Leave a Reply

Your email address will not be published.