ಪತಿಯ ಕಿರಕುಳ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ: ಅಳಿಯ-ಪೋಷಕರ ಮಧ್ಯೆ ಮಾರಾಮಾರಿ


ಜಮಖಂಡಿ: ಪತಿಯ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಮುಂದಾದ ಮಹಿಳೆಯನ್ನು ಆಕೆಯ ಪೋಷಕರು ಬಂದು ರಕ್ಷಿಸಿದ್ದು, ಅಳಿಯ ಹಾಗೂ ಮಹಿಳೆ ಪೋಷಕರ ಮಧ್ಯೆ ಮಾರಾಮಾರಿ ನಡೆದಿದೆ.

ನಗರದ ಜಂಡೆಗಲ್ಲಿಯಲ್ಲಿ ಘಟನೆ ನಡೆದಿದ್ದು, ನಾಲ್ವರು ಗಂಭೀರಗಾಯಗೊಂಡಿದ್ದಾರೆ. ರಮೀಜಾ ತುರಗಲ್ (೩೨), ಅರ್ಷದ್ ತುರಗಲ್, ಮೆಹತಾಬ್ ಜಂಬಗಿ, ಇಸ್ಮಾಯಿಲ್ ಗುನ್ನಾಪುರ ಗಾಯಾಳುಗಳು.

ಏಳು ವರ್ಷದ ಹಿಂದೆ ರಮೀಜಾ ತುರಗಲ್ ಹಾಗೂ ಶಮ್ ಶಾದ್ ಳೊಂದಿಗೆ ವಿವಾಹವಾಗಿತ್ತು. ಆರಂಭದಲ್ಲಿ ಚೆನ್ನಾಗಿದ್ದ ಜೋಡಿಗಳಲ್ಲಿ ಇತ್ತೀಚಿಗೆ ಇಬ್ಬರಲ್ಲಿಯೂ ಮನಸ್ಥಾಪ ಉಂಟಾಗಿತ್ತು. ಪತಿ ರಮೀಜಾ ದಿನನಿತ್ಯ ಪತ್ನಿ ಶಮ್ ಶಾದ್ ಗೆ ಕಿರುಕುಳ ನೀಡಿತ್ತಿಲ್ಲ. ನಿನ್ನೆ ಕೂಡ ಇಬ್ಬರ ಮಧ್ಯೆ ಗಲಾಟೆ ನಡೆದು ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಈ ವಿಷಯ ಪೋಷಕರಿಗೆ ತಿಳಿದು ಕೂಡಲೇ ಸ್ಥಾಳಕ್ಕೆ ಧಾವಿಸಿದ ಅವರು ಶಮ್ ಶಾದ್ ಳನ್ನು ರಕ್ಷಿಸಿದ್ದಾರೆ.

ಶಮ್ ಶಾದ್ ಪೋಷಕರು ರಮೀಜಾ ಮಧ್ಯೆ ಗಲಾಟೆ ನಡೆದಿದ್ದು, ಮಾತಿಗೆ ಮಾತು ಬೆಳೆದು ಪರಸ್ಪರ ಕಟ್ಟಿಗೆ, ಚಾಕುಗಳಿಂದ ಬಡಿದಾಡಿಕೊಂಡಿದ್ದಾರೆ. ಗಾಯಾಳನ್ನು ವಿಜಯಪುರ ಮತ್ತು ಜಮಖಂಡಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸ್ಥಳಕ್ಕೆ ಜಮಖಂಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published.