ಎಟಿಎಮ್ ಕಳ್ಳತನ ಪ್ರಕರಣ: ದುಬೈಗೆ ಹಾರಿದ್ದ ಖದೀಮ ಬಂಧನ


ಕಲಬುರಗಿ: ಎಟಿಎಮ್ ಕಳ್ಳತನ ಮಾಡಿ ದುಬೈ ಗೆ ಪರಾರಿ ಆಗಿದ್ದ ಆರೋಪಿ ಬಂಧಿಸುವಲ್ಲಿ ಜಿಲ್ಲೆಯ ವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದುಬೈನಿಂದ ಆರೋಪಿ ಶಿವಕುಮಾರ (25) ಇಂದು ಬೆಳಗ್ಗೆ ಬಂಧಿಸಿ ಕರೆತಂದಿದ್ದಾರೆ. ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿತಕುಂಟಾ ಗ್ರಾಮದ ನಿವಾಸಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ತಿಂಗಳು ಇಪ್ಪತ್ಮೂರರಂದು ಇಬ್ಬರನ್ನು ಬಂಧಿಸಿದ್ದ ಪೊಲೀಸರು ಈ ಹಿಂದೆ ಜಗದೇವಪ್ಪ (23), ಜಗನ್ನಾಥ್ ( 26 ) ಎಂಬುವವರನ್ನು ಬಂಧಿಸಿದ್ದರು.

ಆದ್ರೆ ಕಳ್ಳತನ ಮಾಡಿ ದುಬೈಗೆ ಹೋಗಿದ್ದ ಶಿವಕುಮಾರ್ ಕಳೆದ ಜೂನ್ 6 ರಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕುಂಬಾರಹಳ್ಳಿ ಗ್ರಾಮದ ಬಳಿಯಿರುವ ಇಂಡಿಯಾ 1 ಎಟಿಎಮ್ ದಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಸಿಸಿಟಿವಿ ಗೆ ಛತ್ರಿ ಹಿಡಿದು ಎಟಿಎಮ್ ಪಾಸವಾರ್ಡ್ ಬಳಸಿ‌ ೧೬ ಲಕ್ಷ ರೂ. ಕಳ್ಳತನ ಮಾಡಿದ್ದರು.

Leave a Reply

Your email address will not be published.