ಧರ್ಮಸಿಂಗ್, ಬಿ.ಎಂ. ಪಾಟೀಲ ರಾಜಕೀಯ ಲೋಕದ ಅಜಾತ ಶತೃಗಳು: ಶಿವರಂಜನ್ ಸತ್ಯಂಪೇಟೆ


ಕಲಬುರಗಿ: ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಹಾಗೂ ಮಾಜಿ ಸಚಿವ ಬಿ.ಎಂ. ಪಾಟೀಲ ಇವರಿಬ್ಬರೂ ರಾಜಕೀಯ ಲೋಕದ ಅಜಾತ ಶತೃಗಳಾಗಿದ್ದಾರೆ ಎಂದು ಪತ್ರಕರ್ತ ಸಾಹಿತಿ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ನಗರದ ಎಂ.ಎ. ಟೆಂಗಳಿಕರ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವಮಾನವ ಫೌಂಡೇಶನ್ ಟ್ರಸ್ಟ್, ಅರ್ಜುನಾಚಾರ್ಯ ಮಹೋಪಾದ್ಯಾಯ ಸೇವಾ ಸಂಸ್ಥೆ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿ ಡಾ. ಎನ್. ಧರ್ಮಸಿಂಗ್ ಹಾಗೂ ಮಾಜಿ ಮಂತ್ರಿ ಬಿ.ಎಂ.ಪಾಟೀಲ ಅವರ ಪುಣ್ಯಸ್ಮರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ರಾಜಕೀಯ ಕ್ಷೇತ್ರದ ದಿಗ್ಗಜರು ವಿಶೇಷ ಉಪನ್ಯಾಸ ಕಾರ್ಯಕ್ರಮಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವರಿಬ್ಬರ ರಾಜಕೀಯ ಸಾಧನೆ ಹಾಗೂ ಬದುಕು ಸಾರ್ಥಕವಾಗಿದೆ ಎಂದು ತಿಳಿಸಿದರು.

ಮಾಹಪೌರ ಶರಣಕುಮಾರ ಮೋದಿ ಉದ್ಘಾಟಿಸಿದರು. ಕನ್ನಡಪರ ಹೋರಾಟಗಾರ ಸಚಿನ್ ಫರಹತಾಬಾದ, ಸಂಸ್ಥೆ ಕಾರ್ಯದರ್ಶಿ ಶುಭವರ್ಧನ್ ಟೇಂಗಳಿಕರ್, ಉಪನ್ಯಾಸಕ ನಾಗರಾಜ ಹೆಬ್ಬಾಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಸಂಸ್ಥೆ ಅಧ್ಯಕ್ಷೆ ಚಿತ್ರಲೇಖಾ ಎ. ಟೆಂಗಳಿಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ರಮೇಶ ಬಡಿಗೇರ ನಿರೂಪಿಸಿದರು.ವಿಶ್ವ ಮಾನವ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಭೀಮನಗೌಡ ಪರಗೊಂಡ ಅಧ್ಯಕ್ಷತೆ ವಹಿಸಿದ್ದರು.
ಸಾಯಬಣ್ಣ ಜಮಾದಾರ ಸ್ವಾಗತಿಸಿದರು. ಮಾರುತಿ ಚಿತ್ತಾಪುರ ವಂದಿಸಿದರು.

Leave a Reply

Your email address will not be published.