ಮೌಢ್ಯಗಳಿಗೆ ಸೆಡ್ಡು: ಗ್ರಹಣ ವಿಕ್ಷಿಸುತ್ತ ಊಟ ಸವಿದ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು


ಚಳ್ಳಕೆರೆ: ಚಳ್ಳಕೆರೆ ತಾಲೂಕಾ ಮಾನವ ಬಂಧುತ್ವ ವೇದಿಕೆ ವತಿಯಿಂದ ಗ್ರಹಣ ಹಿಡಿದ ಸಮಯದಲ್ಲಿ ಊಟ ಮಾಡಿ ಕಂದಾಚಾರ, ಮೌಢ್ಯಗಳ ವಿರುದ್ಧ ಜಾಗೃತಿ ಮೂಡಿಸಿದರು.

ಇಲ್ಲಿನ ವಾಲ್ಮೀಕಿ ನಗರದಲ್ಲಿರುವ  ಚಳ್ಳಕೆರೆ  ತಾಲೂಕಾ ಸಂಚಾಲಕ ರಾಘವೇಂದ್ರ ಅವರ  “ಜೀವನ್ ಭಾಗ್ಯ” ಮನೆಯ ಮಹಡಿ ಮೇಲೆ ಗ್ರಹಣದ ಗ್ರಹಚಾರಬಿಡಿಸಲು  ವೇದಿಕೆಯ ಕಾರ್ಯಕರ್ತರ ಜೊತೆ ಚಿಕ್ಕನ್ ಊಟ ಮಾಡಿದರು.

ಗ್ರಹಣ ಹಿಡಿದ ಸಂದರ್ಭದಲ್ಲಿ ಕೆಲ ಪುರೋಹಿತಶಾಹಿಗಳು ಷಡ್ಯಂತರದಿಂದ ಮುಗ್ಧ ಜನಗಳಲ್ಲಿ ಭಯ ಭೀತಿ ಹುಟ್ಟಿಸಿ ತಮ್ಮ ಸ್ವಂತ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅಂಥವರ ವಿರುದ್ಧ ತೊಡೆತಟ್ಟಿ ನಿಲ್ಲಬೇಕೆಂದು ಮನವಿ ಮಾಡಿಕೊಂಡರು.

 

Leave a Reply

Your email address will not be published.