ಕೆನ್ನಾಳು ನೂತನ ಗ್ರಾಪಂ ಅಧ್ಯಕ್ಷ ವಿಶ್ವನಾಥ್ ಗೆ ಸನ್ಮಾನ


ಪಾಂಡವಪುರ: ತಾಲೂಕಿನ ಜಯಂತಿನಗರ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಮುತುವರ್ಜಿ ವಹಿಸುವುದಾಗಿ ಕೆನ್ನಾಳು ಗ್ರಾಮ ಪಂಚಾಯಿತಿ  ನೂತನ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ತಿಳಿಸಿದರು.

ಶುಕ್ರವಾರ ರಾತ್ರಿ ಜಯಂತಿನಗರ ಗ್ರಾಮದ ರಾಮಮಂದಿರದ ಆವರಣದಲ್ಲಿ ಗ್ರಾಮಸ್ಥರು ಮತ್ತು ಯುವಕರು ನೀಡಿದ ಆತ್ಮೀಯ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯಿಂದ 30 ಲಕ್ಷ ಅನುದಾನ ಬರಲಿದೆ.  ಜತೆಗೆ ನರೇಗಾ ಮತ್ತು ಇನ್ನಿತರ ಯೋಜನೆ ಮೂಲಕ ಗ್ರಾಮದಲ್ಲಿ ರಸ್ತೆ, ಒಳಚರಂಡಿ ಕಾಮಗಾರಿ ನಡೆಸಲಾಗುವುದು ಜತೆಗೆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು, ಶೀಘ್ರದಲ್ಲೇ ನಿರ್ಮಾಣ ಮಾಡಲಾಗುವುದು ಎಂದರು.

ಜೆಡಿಎಸ್ ಮುಖಂಡ ದೇವಾನಂದ ಮಾತನಾಡಿ, ನೂತನ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ಜಯಂತಿನಗರ ವಾರ್ಡ್ ಅನ್ನು ಪ್ರತಿನಿಧಿಸುವುದರಿಂದ ಜತೆಗೆ ಇಲ್ಲಿ ಎರಡು ಬಾರಿ ಅವರನ್ನು ಮತದಾರರು ಚುನಾಯಿಸಿದ್ದಾರೆ. ಜತೆಗೆ 2ನೇ ಬಾರಿ ಕೆನ್ನಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರೂ ಆಗಿರುವುದರಿಂದ ಜಯಂತಿನಗರ ಗ್ರಾಮಕ್ಕೆ ಹೆಚ್ಚಿನ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿದರು. ಗ್ರಾಮದಲ್ಲಿ 60 ವರ್ಷ ಮೀರಿದ ವೃದ್ಧರಿಗೆ ವೃದ್ಧಾಪ್ಯ ವೇತನ ಮಾಡಿಸಿಕೊಡುವುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಯುವ ಮುಖಂಡ ದೇವಾನಂದ, ನಂದೀಶ, ರಾಜೇಗೌಡ, ಗ್ರಾ.ಪಂ.ಸದಸ್ಯೆ ಪುಷ್ಪಲತಾ ಅವರನ್ನು ಗ್ರಾಮಸ್ಥರು ಗೌರವಿಸಿದರು.

ಗ್ರಾಮ ಪಂಚಾಯಿತಿ  ಸದಸ್ಯೆ ಪುಷ್ಪಲತಾ, ಕೆನ್ನಾಳು ವಿಎಸ್‍ಎಸ್‍ಎನ್ ಬ್ಯಾಂಕ್ ಮಾಜಿ ಅಧ್ಯಕ್ಷ ನಂದೀಶ, ಗ್ರಾಮದ ಮುಖಂಡರಾದ ಎಸ್.ಸಿ.ರಾಜೇಗೌಡ ಲಕ್ಷ್ಮಮ್ಮ, ಯುವ ಮುಖಂಡರಾದ ಲೋಕೇಶ, ಗೋವಿಂದರಾಜು, ನವೀನ, ರಾಜೇಶ, ರವಿ, ಸ್ವಾಮಿ, ನಂದೀಶ್, ಮಂಜು, ರಂಗನಾಥ, ಕುಮಾರ, ನಾಗರಾಜು, ಗೋವಿಂದಯ್ಯ, ಕೇಶವ, ಬಕೇಟ್ ರವಿ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.

Leave a Reply

Your email address will not be published.