ಅಂತೂ ಬೆಳಗಾವಿಗೆ ಏರ್ ಇಂಡಿಯಾ ವಿಮಾನ ಬಂತು !!


ಬೆಳಗಾವಿ: ಏರ್ ಇಂಡಿಯಾ ಸಂಸ್ಥೆಯು ಅಂತೂ ಬೆಂಗಳೂರು-ಬೆಳಗಾವಿ-ಬೆಂಗಳೂರು ಮಧ್ಯೆ ವಿಮಾನ ಸಂಚಾರ  ಆರಂಭಿಸಿದೆ.

ಏರ್ ಇಂಡಿಯಾವು ವಾರದಲ್ಲಿ ನಾಲ್ಕು ದಿನ ಅಂದರೆ ಸೋಮವಾರ, ಗುರುವಾರ, ಶುಕ್ರವಾರ ಹಾಗೂ ರವಿವಾರಗಳಂದು ವಿಮಾನ ಓಡಾಡಿಸಲಿದ್ದು, (319/320) ಬೆಳಗ್ಗ 8.30 ಕ್ಕೆ ಬೆಳಗಾವಿಗೆ ವಿಮಾನ ಆಗಮಿಸುವುದು ಮತ್ತು 9.30 ಕ್ಕೆ ಇಲ್ಲಿಂದ ಹೊರಡುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಒಂದು ಸಾಂಕೇತಿಕ ಕಾರ್ಯಕ್ರಮ ಏರ್ಪಡಿಸಿ ವಿಮಾನ ಹಾರಾಟ ಆರಂಭೋತ್ಸವದ ಸಂಭ್ರಮ ಪಡಲಾಯಿತು.

ಸಂಸದರಾದ ಸುರೇಶ ಅಂಗಡಿ, ಪ್ರಭಾಕರ ಕೋರೆ, ಪ್ರಕಾಶ ಹುಕ್ಕೇರಿ, ಶಾಸಕರು, ಪೊಲೀಸ್ ಆಯುಕ್ತರು ಜಿಲ್ಲಾಡಳಿತದ ಅಧಿಕಾರಿಗಳು, ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು, ಏರ್ ಇಂಡಿಯಾ ಪ್ರಧಾನ ವ್ಯವಸ್ಥಾಪಕರು ಮತ್ತು ಇತರೆ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಬೆಳಗಾವಿಗೆ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರನ್ನು ಆದರದಿಂದ ಬರಮಾಡಿಕೊಳ್ಳಲಾಯಿತು.

All-in-all, the event, though small in magnitude, was very successful.

Leave a Reply

Your email address will not be published.