ಚಾಕು ಇರಿದು ದರೋಡೆ: ಮೂವರ ಬಂಧನ


ಮೈಸೂರು: ಕಾರ್ಮಿಕನೊಬ್ಬನಿಗೆ ಚಾಕುವಿನಿಂದ  ಇರಿದು ದರೋಡೆ ಮಾಡಿದ್ದ ಮೂವರು ದುಷ್ಕರ್ಮಿಗಳನ್ನು ನಂಜನಗೂಡು ಪೊಲೀಸರು ಬಂಧಿಸಿದ್ದಾರೆ.

ಪ್ರಸನ್ನ (19), ಮಂಜು (19) ಹಾಗೂ ಅಭಿಷೇಕ (21) ಬಂಧಿತರು. ಬದನವಾಳು-ಹೆಡತೆಲೆ ಮಾರ್ಗ ಮಧ್ಯದಲ್ಲಿ ಆರೋಪಿಗಳು ಕೃಷ್ಣ ಎಂಬ ಕಾರ್ಮಿಕನಿಗೆ ಇರಿದು ದರೋಡೆ ಮಾಡಿದ್ದರು.

ಬಂಧಿತರಿಂದ  ಎರಡು ಮೊಬೈಲ್ , ನಾಲ್ಕು ಸಾವಿರ ರೂ. ನಗದು ವಶಪಡಸಿಕೊಳ್ಳಲಾಗಿದೆ. ದೊಡ್ಡಕವಲಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.