ಕೆಶಿಫ್ ಕಚೇರಿ ಹಾಸನಕ್ಕೆ ಸ್ಥಳಾಂತರಿಸದಂತೆ ಅಶೋಕ ಪೂಜಾರಿ ಆಗ್ರಹ


ಗೋಕಾಕ : ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ರಾಜ್ಯಮಟ್ಟದ ಇಲಾಖೆಗಳನ್ನು ಬೆಳಗಾವಿಯ ಸುವರ್ಣಸೌಧಕ್ಕೆ ವರ್ಗಾಯಿಸಬೇಕೆಂಬ ಬೇಡಿಕೆ ಸರಕಾರದ ಮುಂದಿರುವಾಗಲೇ ಲೋಕೋಪಯೋಗಿ ಇಲಾಖೆಯ ಪ್ರಮುಖ ಕಾರ್ಯಾಲಯ ಕೆಶಿಪ್‍ನ್ನು ಹಾಸನಕ್ಕೆ ವರ್ಗಾಯಿಸಿರುವದು ಸರಕಾರದ ನಕಾರಾತ್ಮಕ ಧೋರಣೆಯಾಗಿದೆ ಅಂತಾ ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,  ಈಗಲಾದರೂ ಸರಕಾರ ಸುವರ್ಣಸೌಧಕ್ಕೆ ಕಾರ್ಯಾಲಯಗಳನ್ನು ವರ್ಗಾಯಿಸುವ ವಿಚಾರದಲ್ಲಿ ಗಂಭೀರತೆಯ ಕ್ರಮಕ್ಕೆ ಮುಂದಾಗದಿದ್ದರೇ ಈ ಭಾಗದ ಜನರ ಆಕ್ರೋಶ ಉಗ್ರ ಸ್ವರೂಪದ ಹೋರಾಟಕ್ಕೆ ಕಾರಣವಾಗುವುದರಲ್ಲಿ ಎರಡುಮಾತಿಲ್ಲ ಎಂದರು.

ಉತ್ತರ ಕರ್ನಾಟಕ ತಾರತಮ್ಯವಾಗುತ್ತಿರುವುದರಿಂದ  ಈ ಭಾಗದ ಜನರಲ್ಲಿ ಆಕ್ರೋಶ ಹೆಚ್ಚುವಂತೆ ಮಾಡುವುದರ ಜೊತೆಗೆ ಹೋರಾಟದ ಮನೋಭಾವನೆಯನ್ನು ಗಟ್ಟಿಗೊಳಿಸುತ್ತಿದೆ.  ಸರಕಾರ ಕೂಡಲೇ ಉತ್ತರ ಕರ್ನಾಟಕದಲ್ಲಿ ಈಗಿರುವ ರಾಜ್ಯ ಮಟ್ಟದ ಯಾವ ಕಾರ್ಯಾಲಯವನ್ನು ಸ್ಥಳಾಂತರಿಸುವ ದುಸ್ಸಾಹಕ್ಕೆ ಕೈ ಹಾಕಬಾರದೆಂದು  ಆಗ್ರಹಿಸಿರುವ ಅವರು, ಸ್ಥಳಾಂತರಗೊಳಿಸಲು ನಿರ್ಧರಿಸಿರುವ ಲೋಕೋಪಯೋಗಿ ಇಲಾಖೆಯ ಕೇಶಿಪ್ ಕಾರ್ಯಾಲಯವನ್ನು ಬೆಳಗಾವಿಯಲ್ಲಿಯೇ ಉಳಿಸಬೇಕೆಂದು ಆಗ್ರಹಿಸಿದ್ದಾರೆ.

ಒಂದು ವೇಳೆ ಸರಕಾರ ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿರುವ ಸುವರ್ಣಸೌಧಕ್ಕೆ ರಾಜ್ಯಮಟ್ಟದ ಕಾರ್ಯಾಲಯಗಳನ್ನು ವರ್ಗಾಯಿಸಿ ಆಡಳಿತಾತ್ಮಕ ಶಕ್ತಿ ತುಂಬುವ ಕಾರ್ಯಕ್ಕೆ ಹಿಂದೇಟು ಹಾಕಿದರೆ ಉತ್ತರ ಕರ್ನಾಟಕ ವಿಕಾಸ ವೇದಿಕೆ ಶೀಘ್ರದಲ್ಲಿಯೇ ಜನಾಂಧೋಲನಕ್ಕೆ ಚಾಲನೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.