ಆರು ರೂ. ಚಿಲ್ಲರೆಗಾಗಿ ಕಂಡಕ್ಟರ್ ಗೆ ರಾಡ್ ನಿಂದ ಹೊಡೆದರು !


ವಿಜಯಪುರ: ಚಿಲ್ಲರೆ ವಿಷಯಕ್ಕಾಗಿ ಕಂಡಕ್ಟರ್ ಕಂ ಡ್ರೈವರ್ ಒಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ  ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ನಡೆದಿದೆ.

ಕೇವಲ 6 ರೂ. ಚಿಲ್ಲರೆಗಾಗಿ ಈ ಹಲ್ಲೆ ನಡೆದಿದ್ದು, ಕಂಡಕ್ಟರ್ ಗೆ ರಾಡ್ ನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಲಾಗಿದೆ.

ಗಾಯಗೊಂಡಿರುವ ಯೂನುಸಸಾಬ್ ಉಸ್ಮಾನಸಾಬನನ್ನು ಇಂಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published.