ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ನಾಡಿನ ಹೆಮ್ಮೆ: ಶಿವಾನಂದ ಭಜಂತ್ರಿ


ಬೈಲಹೊಂಗಲ : ಪ್ರಥಮ ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ಕಿತ್ತೂರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಹೆಮ್ಮೆಯಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕೆಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢ ಶಾಲೆ ಮೈದಾನದಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿದ್ದ ಚನ್ನಮ್ಮ, ರಾಯಣ್ಣ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಜಗತ್ತಿನಲ್ಲೇ ಭಾರತ ಆರ್ಥಿಕವಾಗಿ 6ನೇ ಸ್ಥಾನ ಹೊಂದಿದೆ. ವೈಜ್ಞಾನಿಕ, ಸಾಮಾಜಿಕ, ಸಾಂಸ್ಕøತಿಕ, ಧಾರ್ಮಿಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಭಾರತ ದೇಶ ಮುಂಚೂಣಿಯಲ್ಲಿದೆ. ಯುವಕರು ದೇಶದ ಆಸ್ತಿ. ಯುವಕರು ದೇಶದ ಪ್ರಗತಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಇದೇ ವೇಳೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ವೀರ ಸೇನಾನಿ ದಿ.ಐ.ಎನ್.ಮುದ್ನೂರ ಅವರ ಪತ್ನಿ ಅನ್ನಪೂರ್ಣಾ ಮುದ್ನೂರ ಅವರನ್ನು ಸತ್ಕರಿಸಲಾಯಿತು.

ತಾ.ಪಂ.ಅಧ್ಯಕ್ಷೆ ಶೈಲಾ ಸಿದ್ರಾಮನಿ, ಉಪಾಧ್ಯಕ್ಷ ಬಸನಗೌಡ ಪಾಟೀಲ, ತಹಶೀಲ್ದಾರ ಪ್ರಕಾಶ ಗಾಯಕವಾಡ, ಡಿವೈಎಸ್ಪಿ ಜಿ.ಎಂ.ಕರುಣಾಕರ ಶೆಟ್ಟಿ, ಸ್ವಾತಂತ್ರ್ಯ ಹೋರಾಟಗಾರ ಮುರಳೀಧರ ಮಾಳೋದೆ, ಬಿಇಒ ಪಾರ್ವತಿ ವಸ್ತ್ರದ, ಜಿಪಂ.ಸದಸ್ಯ ಅನಿಲ ಮ್ಯಾಕಲಮರ್ಡಿ, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ, ತಾಪಂ.ಇಒ ಸಮೀರ್ ಮುಲ್ಲಾ, ಎಸ್.ಎಸ್.ಕಾದ್ರೋಳ್ಳಿ, ರಾಜಶೇಖರ ಮೂಗಿ, ನಿಸ್ಸಾರಹ್ಮದ ತಿಗಡಿ, ಎ.ಎಂ.ಲೋದಿ, ಜಿ.ಬಿ.ತುರಮರಿ, ವಿಶ್ವನಾಥ ಮಾತಾಡೆ, ದೈಹಿಕ ಶಿಕ್ಷಣ ಪರೀವೀಕ್ಷಕ ಆರ್.ಬಿ.ಗೋಕಾಕ, ತಾ.ಪಂ.ಸಹಾಯಕ ನಿರ್ದೇಶಕ ಸುಭಾಸ ಸಂಪಗಾಂವಿ ಉಪಸ್ಥಿತರಿದ್ದರು.

ತಹಶೀಲ್ದಾರ ಪ್ರಕಾಶ ಗಾಯಕವಾಡ ಸ್ವಾಗತಿಸಿದರು. ಬಸವರಾಜ ಭರಮಣ್ಣವರ ನಿರೂಪಿಸಿದರು.
ಪಿಎಸ್‍ಐ ಮಲ್ಲಪ್ಪ ಹೂಗಾರ ನೇತೃತ್ವದಲ್ಲಿ ಪೊಲೀಸ ಪೇದೆ, ಹೋಮಗಾಡ್ರ್ಸ, ಕೆಆರ್‍ಸಿಇಎಸ್ ಕಾಲೇಜಿನ ಎನ್‍ಸಿಸಿ, ಸ್ಕೌಟ್ಸ, ಗೈಡ್ಸ ಮತ್ತು ನಾನಾ ಪ್ರೌಢ ಶಾಲೆಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು.

Leave a Reply

Your email address will not be published.