ಬಸವ ಪಂಚಮಿ ಪ್ರಯುಕ್ತ ಸಚಿವರಿಂದ ಶಾಲಾ ಮಕ್ಕಳಿಗೆ ಹಾಲು ವಿತರಣೆ


ದಾವಣಗೆರೆ: ಮಾನವ ಬಂಧುತ್ವ ವೇದಿಕೆ ವತಿಯಿಂದ ಹುಚ್ಚವನಹಳ್ಳಿ ಗ್ರಾಮದಲ್ಲಿ ಸಚಿವ ಶಿವಶಂಕರ ರೆಡ್ಡಿ ಅವರಿಂದ ಬಸವಪಂಚಮಿ ಪ್ರಯುಕ್ತ ಶಾಲಾ ಮಕ್ಕಳಿಗೆ ಹಾಲನ್ನು ವಿತರಿಸಲಾಯಿತು. 

ನಾಗರಪಂಚಮಿ ದಿನ ಬಸವ ಪಂಚಮಿ ಆಚರಿಸುವುದಾಗಿ ರಾಜ್ಯಾದ್ಯಂತ ವೇದಿಕೆಯು ಶಾಲಾ, ಬಡಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಇಲ್ಲಿನ ಹುಚ್ಚವನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಚಿವರು ಆಗಮಿಸಿದ್ದರು. 

ಈ ಸಂದರ್ಭದಲ್ಲಿ ಮಾಯಕೊಂಡದ ಶಾಸಕರಾದ ಲಿಂಗಪ್ಪ ಅವರು ದಾವಣಗೆರೆ ಜಿಲ್ಲಾಧಿಕಾರಿಯಾದ ರಮೇಶ್ ಅವರು ದಾವಣಗೆರೆ ಜಿಲ್ಲಾ ಪಂಚಾಯಿತಿ ಚೀಫ್ ಸೆಕ್ರೆಟರಿ ಯಾದಂತಹ ಅಶ್ವತಿ ಯವರು ಉಪಸ್ಥಿತರಿದ್ದರು

Leave a Reply

Your email address will not be published.