ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನಕ್ಕೆ ಸಂತಾಪ


ಚಳ್ಳಕೆರೆ: ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನಕ್ಕೆ ಎಸ್.ಸಿ. ಎಸ್.ಟಿ. ನೌಕರರ ಸಂಘದ ಅಧ್ಯಕ್ಷ ಬಿ. ತಿಪ್ಪೇಸ್ವಾಮಿ (ಎಲ್ ಐಸಿ) ಕುಟುಂಬ ವರ್ಗದವರು  ಸಂತಾಪ ಸೂಚಿಸಿದ್ದಾರೆ. 

ತಳಕು ಬ್ಲಾಕ್ ಮಹಿಳಾ  ಕಾಂಗ್ರೆಸ್ ಅಧ್ಯಕ್ಷೆ ಸೌಭಾಗ್ಯ ಬಿ. ತಿಪ್ಪೇಸ್ವಾಮಿ ಹಾಗೂ ಮಾನವ ಬಂಧುತ್ವ ವೇದಿಕೆ ಚಳ್ಳಕೆರೆ ತಾಲೂಕಾ ಸಂಚಾಲಕ ಸಿ.ಟಿ. ರಾಘವೇಂದ್ರ ಅವರು ಸಂತಾಪ ಸೂಚಿಸಿದ್ದಾರೆ. 

ಅನಾರೋಗ್ಯದಿಂದ ಬಳಲುತ್ತಿದ್ದ ತಿಪ್ಪೆಸ್ವಾಮಿ ಅವರನ್ನು ಬೆಂಗಳೂರಿನ ಕೊಲಂಬಿಯಾ ಏಷಿಯಾ ಅಸ್ಪತ್ರೆಗೆ ದಾಖಲಿಸಲಾಗಿತ್ತು.ಇವರ ಪಾರ್ಥಿವ ಶರೀರವನ್ನು ಬುಧವಾರ ಮಧ್ಯಾಹ್ನ ಚಳ್ಳಕೆರೆಗೆ ತರಲಾಗುತ್ತಿದೆ.

ಎಚ್.ಡಿ. ದೇವೇಗೌಡರ ನೇತೃತ್ವದ ಸರ್ಕಾರದಲ್ಲಿ ಅಬಕಾರಿ ಹಾಗೂ ಜೆ.ಎಚ್.ಪಟೇಲ್ ಅವರ ಆಡಳಿತದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ವಾಲ್ಮೀಕಿ ಸಮುದಾಯವನ್ನು ಸಂಘಟಿಸಿದರು. ಎಲ್ಲರ ಸಹಕಾರ ಪಡೆದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ‘ಶ್ರೀ ವಾಲ್ಮೀಕಿ ಗುರುಪೀಠ’ ಸ್ಥಾಪಿಸಲು ಶ್ರಮಿಸಿದ್ದರು.

Leave a Reply

Your email address will not be published.