ಚಿಕ್ಕೋಡಿ ವಿದ್ಯಾರ್ಥಿಗಳಿಗಾಗಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದ ಕೆಎಲ್ಇ ಸಂಸ್ಥೆ


ಚಿಕ್ಕೋಡಿ: ಚಿಕ್ಕೋಡಿಯ ಕೆ.ಎಲ್.ಇ ಇಂಜೀನಿಯರಿಂಗ್ ಕಾಲೇಜಿಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಾಚಾರ್ಯ ಡಾ. ಸಿದ್ರಾಮಪ್ಪ ಇಟ್ಟಿ ತಿಳಿಸಿದರು.

ಇಲ್ಲಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ನೂತನ ಬಸ್ ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು , ನಮ್ಮ ಮಹಾವಿದ್ಯಾಲಯವು 7 ಬಸ್ಸಗಳನ್ನು ಹೊಂದಿದ್ದು, ನಿರಂತರವಾಗಿ ಚಿಕ್ಕೋಡಿ ಬಸ್ಸ್ ನಿಲ್ದಾಣದಿಂದ ಬಸ್ಸ್ ಸೌಕರ್ಯವನ್ನು ಒದಗಿಸಲಾಗಿದೆ. ಇದರ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ವಿಶೇಷ ಬಸ್ಸ್ ಸೌಕರ್ಯ ಕಲ್ಪಿಸಲಾಗಿದೆ. ರಾಯಬಾಗದಿಂದ ಬರುವ ಬಸ್ಸು ಯಡ್ರಾವ, ಶಿವಶಕ್ತಿ ಫ್ಯಾಕ್ಟರಿ, ನಸಲಾಪೂರ, ಅಂಕಲಿ, ಸಿದ್ದಾಪೂರವಾಡಿ, ರುಪಿನಾಳ, ಪ್ಯಾಕ್ಟರಿ ಕ್ರಾಸ್, ಕೇರೂರ ಕ್ರಾಸ್, ಬಸವನಾಳಗಡ್ಡೆ ಮಾರ್ಗವಾಗಿ ಬರಲಿದೆ ಎಂದರು.

ನಿಪ್ಪಾಣಿಯಿಂದ ಬರುವ ಬಸ್ಸು ಪಟ್ಟನಕೂಡಿ, ಮಹಾಲಕ್ಷ್ಮೀ ಮಂದಿರ, ಕೂಠಾಳಿ, ಕೋಥಳಿ ಕ್ರಾಸ್, ಚಿಂಚಣಿ ಕ್ರಾಸ್, ಚೌಸನ್ ಕಾಲೇಜ, ಹರಿ ನಗರ್ ಮಾರ್ಗವಾಗಿ ಬರಲಿದೆ. ಸಂಕೇಶ್ವರ ಬರುವ ಬಸ್ಸು ಕಮತನೂರ ಕ್ರಾಸ್, ಕಮತನೂರ, ನೀಡಸೂಶಿ ಗೇಟ್, ಅಮ್ಮಣಗೀ ಗೇಟ್, ಬೋರಗಲ ಗೇಟ್ , ಮಜಲಟ್ಟಿ ಕ್ರಾಸ್, ಕರೋಶಿ ಕ್ರಾಸ್, ತೋರಣಹಳ್ಳಿ ಕ್ರಾಸ್, ಹುಕ್ಕೇರಿ ರೋಡ್ ಕ್ರಾಸ್, ವಿದ್ಯಾ ನಗರ್, ಹಾಲಟ್ಟಿ, ಬಸವ ಸರ್ಕಲ್ ಮಾರ್ಗವಾಗಿ ಬರಲಿದೆ.  ಬೋರಗಾಂವದಿಂದ ಬರುವ ಬಸ್ಸು ಶಿರದವಾಡ, ಬೇಡಿಕಿಹಾಳ ಕ್ರಾಸ್, ಸದಲಗಾ, ಎಕ್ಸಂಬಾ, ನನದಿ ಫ್ಯಾಕ್ಟರಿ ಕ್ರಾಸ್, ಹಿರೇಕೋಡಿ ಮಾರ್ಗವಾಗಿ ಬರಲಿದೆ ಎಂದು ವಿವರಿಸಿದರು.

ಈ ವಿಶೇಷ ಬಸ್ಸ್ ಸೌಲಭ್ಯವನ್ನು ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸದುಪಯೋಗ ಪಡಿಸಿಕೋಳ್ಳಬೇಕೆಂದು ಹೇಳಿದರು. ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

Leave a Reply

Your email address will not be published.