ಚಿಕ್ಕೋಡಿ:ಶಿಕ್ಷಕರ ಪ್ರಗತಿಪರ ಪೆನಲ್‍ಗೆ ಅಭೂತಪೂರ್ವ ಜಯ

ಚಿಕ್ಕೋಡಿಯ ದಿ ಚಿಕ್ಕೋಡಿ ತಾಲೂಕಾ ಪೂರ್ವ ಭಾಗ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥೀಗಳು ವಿಜಯೋತ್ಸವ ಆಚರಿಸಿದರು.

 


ಚಿಕ್ಕೋಡಿ : ಇಲ್ಲಿನ ದಿ ಚಿಕ್ಕೋಡಿ ತಾಲೂಕಾ ಪೂರ್ವ ಭಾಗ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಆಡಳಿತ ಮಂಡಳಿ ಆಯ್ಕೆಗೆ ಅತ್ಯಂತ ತುರುಸಿನಿಂದ ನಡೆದ ಚುನಾವಣೆಯಲ್ಲಿ ಶಿಕ್ಷಕರ ಪ್ರಗತಿಪರ ಪೆನಲ್‍ಗೆ ಅಭೂತಪೂರ್ವ ಜಯ ಲಭಿಸಿದೆ.

ಒಟ್ಟು 13 ಜನ ಆಡಳಿತ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಬೇಕಾಗಿತ್ತು. ಅದರ ಪೈಕಿ ಶಿಕ್ಷಕರ ಪ್ರಗತಿಪರ ಪೆನಲ್‍ನ 11 ಜನರು ಮತ್ತು ಪ್ರತಿಸ್ಪರ್ಧಿ ಪೆನಲ್‍ನ 2 ಜನ ಆಯ್ಕೆಯಾಗಿದ್ದಾರೆ.

ಶಿಕ್ಷಕರ ಪ್ರಗತಿಪರ ಪೆನಲ್‍ನ ಗಂಗಾಧರ ಮಾ.ಕಾಂಬಳೆ, ಅಬ್ದುಲ್‍ಸಾಹೇಬ ಇ.ನದಾಫ್, ಚಂದ್ರಶೇಖರ ಭೀ.ಅರಭಾಂವಿ, ಸುಭಾಷ ಎಸ್.ಸಾರಾಪೂರೆ, ವಿನೋದ ಶ್ಯಾ.ಖೋತ, ಸದಾಶಿವ ಬಿ.ಖೋತ, ಮೋಹಸಿನಹಮದ ಎಂ.ಪಟೇಲ್, ದೀಪಕ ಮ.ಚವ್ಹಾಣ, ಗಿರೀಶ ಮಾ.ಬಿಸಲನಾಯಿಕ, ಶಿವಲೀಲಾ ಅ.ಹಿಪ್ಪರಗಿ, ಬಬಿತಾ ಅ.ನೂಲಿ ಹಾಗೂ ಪ್ರತಿಸ್ಪರ್ಧಿ ಪೆನಲ್‍ದಿಂದ ಸಿದ್ದಪ್ಪಾ ಶಿ.ದುಪದಾಳ ಮತ್ತು ದಿಲೀಪ ಹ.ಕಾಂಬಳೆ ಸೇರಿದಂತೆ 13 ಜನರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸತೀಶ ಮುಸಂಡಿ ಘೋಷಣೆ ಮಾಡಿದ್ದಾರೆ.

ವಿಜಯೋತ್ಸವ
ಪ್ರಗತಿ ಪೆನಲ್‍ಗೆ ಅಭೂತಪೂರ್ವ ಜನ ಲಭಿಸಿದ ಹಿನ್ನೆಲೆಯಲ್ಲಿ ಪೆನಲ್ ಬೆಂಬಲಿತ ಶಿಕ್ಷಕರು ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.

92 ಕುಲಗೆಟ್ಟ ಮತಗಳು
ಈ ಸಂಘದಲ್ಲಿ ಮತದಾರರು ಇರುವುದು 637 ಅದರಲ್ಲಿ 622 ಜನ ಮತದಾನ ಮಾಡಿದ್ದಾರೆ. ಅದರಲ್ಲಿ 92 ಮತಗಳು ಕುಲಗೆಟ್ಟಿವೆ. ಇಲ್ಲಿರುವವರೆಲ್ಲರೂ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರೇ ಅಂದರೇ ಎಲ್ಲರೂ ಅತ್ಯಂತ ಬುದ್ದಿವಂತರು, ಪ್ರಜ್ಞಾವಂತರು, ಲಕ್ಷಾಂತರ ಜನ ಆದರ್ಶ ಜನರನ್ನು ತಯಾರಿಸುವಲ್ಲಿ ಮಹತ್ತರ ಕಾರ್ಯ ಮಾಡುವಂತಹ ಶಿಕ್ಷಕರು ಮತದಾನ ಮಾಡುವಂತಹ ಈ ಸಂಘದ ಚುನಾವಣೆಯಲ್ಲಿ 622ರಲ್ಲಿ 92 ಮತಗಳು ಕುಲಗೆಟ್ಟಿವೆ ಎಂದು ನಾಚೀಕೆಗೇಡಿನ ಸಂಗತಿ.

 

Leave a Reply

Your email address will not be published.