ಮನೆಗಳ್ಳತನ ಮಾಡುತ್ತಿದ್ದ ಕಳ್ಳರ ಬಂಧನ: 10 ಲಕ್ಷ ಮೌಲ್ಯದ ಆಭರಣ, ಬೈಕ್ ವಶ


ಹಾವೇರಿ: ಜಿಲ್ಲೆಯಲ್ಲಿ ವಿವಿಧ ತಾಲೂಕಿನ ಹಳ್ಳಿಗಳಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಹಾವೇರಿ ಜಿಲ್ಲಾ ಪೊಲೀಸರು ಬಂಧಿಸಿ, ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ ಕೆ. ತಿಳಿಸಿದರು.

ಬುಧವಾರ ಎಸ್.ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲಿಂಗ್ ಮಾಡುತ್ತಿದ್ದಾಗ ಬಂಕಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಮುನವಳ್ಳಿ ಹದ್ದಿನ ದುರಗಮ್ಮ ದೇವಿ ದೇವಸ್ಥಾನದ ಮುಂದೆ ಸಂಶಯಾಸ್ಪದವಾಗಿ ಹೊರಟಿದ್ದ ರಾಣಿಬೇನ್ನೂರ ತಾಲೂಕಿನ ಕುಪ್ಪೆಲೂರ ಗ್ರಾಮದ, ಸಧ್ಯ ಉಕ್ಕಡಗಾತ್ರಿಯಲ್ಲಿ ವಾಸವಿರುವ ಕರಿಬಸ್ಯಾ ಉರ್ಪ ಕರಿಬಸಪ್ಪ ತಂದೆ ಕೃಷ್ಣಪ್ಪ ಪವಾರ(30), ಹಿರೆಕೇರೂರು ತಾಲೂಕಿನ ಎಡಗೋಡಿ ಗ್ರಾಮ ಹಾಲಿ ವಸ್ತಿ ಉಕ್ಕಡಗಾತ್ರಿಯಲ್ಲಿರುವ ಸುರೇಶ ಉರ್ಪ ಸೂರ್ಯಾ ತಂದೆ ಜಗದೀಶ ಪವಾರ (30), ರಾಜಾ ಉರ್ಪ ಕೆಂಪರಾಜ, ಕೆಂಪಯ್ಯ ತಂದೆ ಜಗದೀಶ ಗುಂಗೆಪ್ಪ ಪವಾರ ಉರ್ಪ ಆರೇರ (25), ಕರಿಗೌಡ ತಂದೆ ಜಗದೀಶ ಗುಂಗೆಪ್ಪ ಪವಾರ ಉರ್ಪ ಆರೇರ (19), ಬಳ್ಳಾರಿ ಜಿಲ್ಲೆಯ ಹೊಸಪೇಟಿ ತಾಲೂಕಿನ ಹೊಸಳ್ಳಿ ಜೋಗಳ್ಳಿ, ಹಾಲಿ ವಸ್ತಿ ಉಕ್ಕಡಗಾತ್ರಿ ಭೀಮಣ್ಣ ಉರ್ಪ ಭೀಮ್ಯಾ ತಂದೆ ಕಂಗಲಿ ಪವಾರ (22) ಎಂಬ ಬಂಧಿತರು ನೋಡಿ ಜೀಪ್ ನಿಲ್ಲಿಸಿದಾಗ, ಕದಿಮರು, ಪೊಲೀಸರ ಜೀಪ್ ನೋಡಿ, ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಆಗ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳು ಬೆನ್ನಟ್ಟಿ ಕಳ್ಳರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ವಿಚಾರಣೆ ವೇಳೆ ಬಂಧಿತರು 12 ಮನೆಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ರೂ 9.54.800 ಮೌಲ್ಯದ 308 ಗ್ರಾಂ ಬಂಗಾರದ ಆಭರಣಗಳು, 32.000 ರೂ.ಮೌಲ್ಯದ 700 ಗ್ರಾಂ ಬೆಳ್ಳಿ, 30 ಸಾವಿರ ಮೌಲ್ಯದ ಒಂದು ಬೈಕ್ ಒಟ್ಟು 10.16.800 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಬಂಕಾಪುರ ಠಾಣೆಯಲ್ಲಿ 2 ಪ್ರಕರಣ, ಆಡೂರು ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಹಿರೆಕೇರೂರು ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಹಾವೇರಿ ಗ್ರಾಮೀಣ ಠಾಣೆಯಲ್ಲಿ 3 ಪ್ರಕರಣ ಹಾಗೂ ರಾಣಿಬೇನ್ನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಶಿಗ್ಗಾವಿ ವೃತ್ತದ ಸಿ.ಪಿ.ಐ.ಆರ್.ಎಫ್.ದೇಸಾಯಿ, ಬಂಕಾಪುರ ಠಾಣೆಯ ಪಿ.ಎಸ್.ಐ.ಸಂತೋಷ ಪಾಟೀಲ, ತಡಸ ಠಾಣೆಯ ಪಿ.ಎಸ್.ಐ.ಎಚ್.ಆಂಜನೇಯ,ಬಂಕಾಪುರ ಠಾಣೆಯ ಹೆಡ್ ಕಾನ್ ಸ್ಟೇಬಲ್ ಜಯರಾಮ ಲಮಾಣಿ, ಬಿ.ಎಂ.ರಾಜೇಸಾಬನವರ, ಕುರುವತ್ತಿ, ಮಲ್ಲಪ್ಪ ಮೇಟಿ, ಶೇಖಪ್ಪ ಕುರುಬರ, ರವಿ ಅಳಲಗೇರಿ, ವೆಂಕಟೇಶ ಯಲ್ಲಪ್ಪ ಕುರಿ, ಶಂಭು ಯಲಿವಾಳ, ಫಕ್ಕೀರೇಶ ಕಳ್ಳಿಮನಿ,ಜೀಪ್ ಚಾಲಕ ಪ್ರಶಾಂತ, ಯಲ್ಲಪ್ಪ ದೊಡ್ಡಮನಿ ಅವರಿಗೆ ಪೊಲೀಸ್ ಸಅಧಿಕ್ಷರು ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಣೆ ಮಾಡಿದ್ದಾರೆ.

Leave a Reply

Your email address will not be published.