ಶಹಾಪುರದಲ್ಲಿ ವೇಶ್ಯಾವಾಟಿಕೆ ದಂಧೆ: ಇಬ್ಬರ ಬಂಧನ


ಶಹಾಪುರ:ಶಹಾಪುರ ಪಟ್ಟಣದ ಬಿಗುಡಿ ರಸ್ತೆಯ ಮೋರಟಗಿ ಹೊಟೇಲ್ ಹತ್ತಿರವಿರುವ ಶರಣಪ್ಪ ಎಂಬುವವರ ಮನೆಯೊಂದರಲ್ಲಿ ನಡೆಸುತ್ತಿರುವ ವೇಶ್ಯಾವಾಟಿಕೆ ದಂಧೆಯ ಜಾಲವನ್ನು ಶಹಾಪುರ ಪೊಲೀಸರು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಲ್ಲಿ ಶ್ರೀದೇವಿ ಹಾಗೂ ಹನುಮಂತ ಎಂಬ ಪ್ರಮುಖ ಆರೋಪಿಗಳು ಈ ದಂಧೆಯ ರೂವಾರಿಗಳು ಆಗಿದ್ದರು ಎಂದು ಹೇಳಲಾಗುತ್ತಿದೆ.

ಕಲಬುರ್ಗಿಯಿಂದ ಅಮಾಯಕ ಹೆಣ್ಣು ಮಕ್ಕಳಿಗೆ ಕೆಲಸದ ಆಮಿಷ ತೋರಿಸಿ ವೇಶ್ಯಾವಾಟಿಕೆ ದಂಧೆಗೆ ತಳ್ಳುತ್ತಿದ್ದರು ಎಂದು ಕೇಳಿ ಬರುತ್ತಿದೆ.

ಖಚಿತ ಮಾಹಿತಿ ಮೇರೆಗೆ ಶಹಾಪುರ ಠಾಣೆಯ ಪೊಲೀಸರು ರಾತ್ರಿ ಜಾಲ ಬೀಸಿ 5000 ರೂ. ಎರಡು ಮೊಬೈಲ್ಗಳು & ಕಾಂಡೋಮ್ಗಳು ವಶಪಡಿಸಿಕೊಂಡಿದ್ದಾರೆ.

ಈ ದಂಧೆಯಲ್ಲಿ ತೊಡಗಿದ್ದ ಇನ್ನೂ ಇಬ್ಬರು ಮೌನೇಶ್ ಮತ್ತು ಶರಣಪ್ಪ ಎಂಬ ವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.