ಮರ ಹತ್ತಿದ ಯುವಕನಿಗೆ ವಿದ್ಯುತ್ ತಂತಿ ತಗುಲಿ ಸಾವು


ಧಾರವಾಡ: ಮೇವಿಗಾಗಿ ಗಿಡ ಹತ್ತಿದ್ದ ಯುವಕನೊಬ್ಬನಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ತಾಲೂಕಿನ ಉಪ್ಪಿನ ಬೆಟಗೇರಿಯಲ್ಲಿ  ನಡೆದಿದೆ. 

ಸೈಫ್ ಅಲಿ ಶಮಸುದ್ದೀನ ಧಾರವಾಡ (18) ಮೃತ ದುರ್ದೈವಿ.  ಆಡಿಗೆ ಮೇವು ಮಾಡುವ ಸಂಬಂಧ ಮರದ ಮೇಲೆ ಹತ್ತಿ ಗಿಡದ ತಪ್ಪಲು ಕಡಿಯುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಯುವಕ ಮರದಿಂದ ಕೆಳಗೆ ಬಿದ್ದಿದ್ದು  ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಧಾರವಾಡ ಗ್ರಾಮೀಣ್ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. 

Leave a Reply

Your email address will not be published.