ಗುಂಡಿ ಅಗೆದು ಶವಗಳ ರುಂಡ ಕತ್ತರಿಸಿದ ದುಷ್ಕರ್ಮಿಗಳು…!

ಸಾಂಧರ್ಭಿಕ ಚಿತ್ರ

ತುಮಕೂರು:  ಸ್ಮಾಶಾನದಲ್ಲಿ ಮಣ್ಣು ಮಾಡಿದ್ದ ಇಬ್ಬರ ಶವಗಳನ್ನು ಹೊರತೆಗೆದು ರುಂಡ ಕತ್ತಿರಿಸಿಕೊಂಡು ಹೋದ ಘಟನೆ  ಶಿರಾ ತಾಲೂಕಿನ ಬಿದರೆಕರೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಲ್ಲುಕೋಟೆಯ ದೇವರಾಜು ಎಂಬುವವರು ಇತ್ತೀಚಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮತ್ತು ಮಂಜುನಾಥ ಎಂಬಾತ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇಬ್ಬರ ಶವಗಳನ್ನು ಗ್ರಾಮದ ರುಧ್ರಭೂಮಿಯಲ್ಲಿ ಮಣ್ಣು ಮಾಡಲಾಗಿತ್ತು. ದುಷ್ಕರ್ಮಿಗಳು ಮಣ್ಣು ಅಗೆದು ಶವಗಳ ರುಂಡ ಕತ್ತರಿಸಿಕೊಂಡು ಹೋಗಿದ್ದಾರೆ.

ಇದನ್ನು ಕಂಡ ಭಯಭೀತರಾದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮಾಟ ಮಂತ್ರಕ್ಕಾಗಿ ದುಷ್ಕರ್ಮಿಗಳು ಶವಗಳ ರುಂಡ ಕತ್ತರಿಸಿಕೊಂಡು ಹೋಗಿರಬಹುದು ಅಂತಾ ಗ್ರಾಮದಲ್ಲಿ ಗುಲ್ಲೆದ್ದಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published.