ರಾಜ್ಯಸಭೆ ಉಪಸಭಾಪತಿಯಾಗಿ ಎನ್ ಡಿಎ ಮೈತ್ರಿಕೂಟದ ಹರಿವಂಶ ಆಯ್ಕೆ


ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ ವಿರುದ್ಧ ಜಯ

ಹೊಸದಿಲ್ಲಿ: ಎನ್ ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ರಾಜ್ಯಸಭೆಯ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಪ್ರತಿಪಕ್ಷಗಳ ಅಭರ್ಥಿ ಕಾಂಗ್ರೆಸ್ ಪಕ್ಷದ ಬಿ.ಕೆ. ಹರಿಪ್ರಸಾದ ವಿರುದ್ಧ ಹರಿವಂಶ ನಾರಾಯಣ ಗೆಲುವು ಸಾಧಿಸಿದ್ದಾರೆ.

ಬಿ.ಕೆ. ಹರಿಪ್ರಸಾದ ಅವರು 105 ಮತಗಳು ಪಡೆದಿದ್ದಾರೆ. ಎನ್ ಡಿಎ ಅಭ್ಯರ್ಥಿ ಹರಿವಂಶ ನಾರಾಯಣ 125 ಮತಗಳನ್ನು ಪಡೆಯುವ ಮೂಲಕ ರಾಜ್ಯಸಭಾ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಉಪಸಭಾಪತಿಯಾಗಿದ್ದ ಪಿ. ಜೆ. ಕುರಿಯನ್ ಜುಲೈ 1 ರಂದು ನಿವೃತ್ತಿ ಹೊಂದಿದ್ದರು.

ಕಾಂಗ್ರೆಸ್ ಅಭರ್ಥಿಗೆ ತೃಣಮೂಲ ಕಾಂಗ್ರೆಸ್, ಎಸ್ ಪಿ, ಬಿಎಸ್ ಪಿ ಸಾಥ್ ನೀಡಿದ್ದರು. ಬಿಜೆಪಿ ಅಭರ್ಥಿ ಪರ ಶಿವಸೇನಾ, ಟಿಆರ್ ಎಸ್, ಅಕಾಲಿ ದಳ, ಬಿಜೆಡಿ, ಜೆಡಿಯು ಪಕ್ಷಗಳು ಮತ ಚಲಾಯಿಸಿದರು. ವೈಎಸ್ ಆರ್ ಕಾಂಗ್ರೆಸ್ ಮತದಾನದಿಂದ ದೂರು ಉಳಿದಿದೆ.

ಪ್ರಧಾನಿ ಮೋದಿ ಅಭಿನಂದನೆ:

ಹರಿವಂಶ್ ನಾರಾಯಣ ಅವರು ಉತ್ತಮ ಬರಹಗಾರರು, ಅವರ ಪ್ರತಿಭೆ ಅಮೋಘವಾಗಿದೆ. ಮಾಜಿ ಪ್ರಧಾನಿ ಚಂದ್ರಶೇಖರ ಅವರ ನೆಚ್ಚಿನ ವ್ಯಕ್ತಿ, ನಾನು ಇಡೀ ಸದಸ್ಯರ ಪರವಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.

Leave a Reply

Your email address will not be published.