ಬಿಆರ್‌ಟಿಎಸ್ ಕಾಮಗಾರಿ ಪರಿಶೀಲಿಸಿದ ಡಿಸಿ ದೀಪಾ


ಧಾರವಾಡ:  ಬಹುತೇಕ ನವೆಂಬರ್ 1 ಕ್ಕೆ ಬಿಆರ್‌ಟಿಎಸ್ ಯೋಜನೆಯಡಿ ಬಸ್ ಸಂಚಾರ ಆರಂಭವಾಗಲಿದೆ. ಸಪ್ಟೆಂಬರ್ ಅಂತ್ಯದೊಳ್ಳಗೆ ಎಲ್ಲ ಕಾಮಗಾರಿಗಳನ್ನು ಸಂಬಂಽತ ಇಲಾಖೆ, ಗುತ್ತಿಗೆದಾರರು ಪೂರ್ಣಗೊಳ್ಳಿಸಬೇಕು ಎಂದು ಜಿಲ್ಲಾಽಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.

ಬೆಳಿಗ್ಗೆ ನಗರದಲ್ಲಿನ ಬಿಆರ್‌ಟಿಎಸ್ ಕಾಮಗಾರಿಗಳನ್ನು ಪರಿಶೀಲಿಸಿದ ವರು, ಬೆಳಿಗ್ಗೆ ೭ಕ್ಕೆ ಆಲೂರು ವಕಟರಾವ್ ವೃತ್ತದಿಂದ ಗಾಂDiನಗರದವರೆಗೆ ಸುಮಾರು ೩ ಕಿಮೀ ಸ್ವತಃ ಕಾಲ್ನಡಿಗೆಯಲ್ಲಿ ತೆರಳಿ ಪ್ರತಿ ಬಸ್ ನಿಲ್ದಾಣದ ಕಾಮಗಾರಿ, ರಸ್ತೆ, ಪುಟಪಾತ್ ಮತ್ತು ಚರಂಡಿ ನಿರ್ಮಾಣದ ಕಾಮಗಾರಿಗಳನ್ನು ಪರಿಶೀಲಿಸಿ ಅಽಕಾರಿಗಳಿಂದ ಸ್ಪಷ್ಟಣೆ ಪಡೆದರು. ಯೋಜನೆಯಲ್ಲಿ ನಿಯಮಾವಳಿಯಂತೆ ಕಾಮಗಾರಿ ಗುಣಮಟ್ಟವಾಗಿರಬೇಕು. ಇಲ್ಲದಿದ್ದರೆ ಸಂಬಂಽಸಿದ ಅಽಕಾರಿಯನ್ನು ಹೊಣೆಗಾರರನ್ನಾಗಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಎಚ್ಚರಿಸಿದರು.

ನಿಧಾನಗತಿಯಲ್ಲಿ ಬಿಆರ್‌ಟಿಸಿ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಹೆಸ್ಕಾಂ ಸೇರಿದಂತೆ ವಿವಿಧ ಇಲಾಖೆ ಅಽಕಾರಿಗಳಿಗೆ ನಿಽಷ್ಟ ಕಾಲಮಿತಿ ನೀಡುವ ಮೂಲಕ ಜಿಲ್ಲಾಽಕಾರಿಗಳು ಚುರುಕು ಮುಟ್ಟಿಸಿದರು. ಪ್ರತಿದಿನ ಫೋಟೊ ಸಹಿತ ಪ್ರಗತಿ ವರದಿ ನೀಡುವಂತೆ ಬಿಆರ್‌ಟಿಎಸ್ ಅಽಕಾರಿಗಳಿಗೆ ಸೂಚಿಸಿದರು.

ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಬಿ.ಆರ್.ಟಿ.ಎಸ್‌ನ ಉಪ ಪ್ರಧಾನ ವ್ಯವಸ್ಥಾಪಕರಾದ ಬಸವರಾಜ ಕೆರಿ, ಹುಬ್ಬಳ್ಳಿ ಕೆ.ಆರ್.ಡಿ.ಸಿ.ಎಲ್‌ನ ಕಾರ್ಯಪಾಲಕ ಅಭಿಯಂತರರಾದ ಸುನಿಲ್.ವಿ.ಸಿ, ಸಹಾಯಕ ಕಾರ್ಯಪಾಲಕ ಅಭಿಯಂತರ ನಾರಾಯಣ ಕುರಂದಕರ, ಸುನಿಲ್ ಅಭ್ಯಂಕರ ಹಾಗೂ ಪಾಲಿಕೆ ಅಽಕಾರಿಗಳಿದ್ದರು.

Leave a Reply

Your email address will not be published.