ಫೇಸ್ ಬುಕ್ ನಲ್ಲಿ ಅಶ್ಲೀಲ್ ಮೆಸೇಜ್ : ಯುವಕನ ಹಿಡಿದು ಥಳಿಸಿದ ದಿಟ್ಟ ಯುವತಿ


ಬೆಂಗಳೂರು: ನಕಲಿ ಖಾತೆಯಿಂದ ಫೇಸ್ ಬುಕ್ ನಲ್ಲಿ ಅಶ್ಲೀಲ್ ಸಂದೇಶ ರವಾನಿಸುತ್ತಿದ್ದ ಯುವಕನಿಗೆ ಬಲೆ ಬೀಸಿದ ಯುವತಿ ಆತನನ್ನು ಬೆಂಗಳೂರಿಗೆ ಕರೆಸಿಕೊಂಡು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾಳೆ.

ಮೈಸೂರು ಮೂಲದ ಸಿದ್ದನಗೌಡ ಎಂಬಾತ ಕಳೆದ 6 ತಿಂಗಳಿನಿಂದ ಯುವತಿಗೆ ಅಶ್ಲೀಲ್ ಸಂದೇಶ ರವಾನಿಸುತ್ತಿದ್ದ. ಅಲ್ಲದೇ ಅವಳದೇ ಪೋಟೋ ಎಡಿಟ್ ಮಾಡಿ ಅಶ್ಲೀಲ್ ಮೆಸೇಜ್ ಕಳುಹಿಸುತ್ತಿದ್ದ. ಯುವತಿ ಹಲವು ಬಾರಿ ಮನವಿ ಮಾಡಿದರು ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ.  ಇದರಿಂದ ರೊಚ್ಚಿಗೆದ್ದ ಯುವತಿ ಆತನನ್ನು ಹಿಡಿದು ಥಳಿಸಲು  ಪ್ಲ್ಯಾನ್ ಮಾಡಿದ್ದಳು.

ಅದರಂತೆ ಇಂದು ಇಬ್ಬರು ಭೇಟಿ ಆಗೋಣ ಎಂದು ಆತನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಳು. ಮೈಸೂರಿನಿಂದ ಬೆಂಗಳೂರಿಗೆ ಬಂದ ಆತ ಯುವತಿಯನ್ನು ಬಸವೇಶ್ವರ್ ನಗರದಲ್ಲಿ ಭೇಟಿ ಮಾಡಿದ್ದ. ಈ ವೇಳೆ ಕರ್ನಾಟಕ ನವ ನಿರ್ಮಾಣ ಸಂಘಟನೆ ನೆರವಿನೊಂದಿಗೆ ಯುವತಿ  ಆತನನ್ನು ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

Leave a Reply

Your email address will not be published.