ಅಧಿಕಾರಕ್ಕಾಗಿ ಅನೈತಿಕ ರಾಜಕಾರಣ ಮಾಡಿದ್ದು ಬಿಎಸ್ ವೈ: ಸಿದ್ದರಾಮಯ್ಯ ಆರೋಪ


ವಿಜಯಪುರ: ಆಪರೇಷನ್ ಕಮಲ ಮೂಲಕ ಶಾಸಕರನ್ನು ಖರೀದಿಸಿ ಬಿ.ಎಸ್. ಯಡಿಯೂರಪ್ಪ ಅನೈತಿಕ ರಾಜಕಾರಣ ಮಾಡಿ ಅಧಿಕಾರ ಗದ್ದುಗೆ ಏರಿದ್ರು ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸದ್ದಾರೆ.

ವಿಜಯಪುರ ಜಿಲ್ಲೆಯ  ಆಲಮಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 20 ರಿಂದ 25 ಕೋಟಿ ರೂ. ಕೊಟ್ಟು ಶಾಸಕರನ್ನು ಖರೀದಿ ಮಾಡಿದ್ದರು. ಆಪರೇಷನ್ ಕಮಲ ಅಂದ್ರೆ ದುಡ್ಡು ಕೊಟ್ಟು ಕುರಿ, ಎಮ್ಮೆ, ದನಗಳನ್ನು ಕೊಂಡುಕೊಂಡಂತೆ ಶಾಸಕರನ್ನು ಖರೀದಿಸುವುದು, ಈ ಹಿಂದೆ ಬಿಎಸ್ ವೈ ಅದನ್ನೇ ಮಾಡಿದ್ದರು ಅಂತಾ ಲೇವಡಿ ಮಾಡಿದರು.

ಬಿಜೆಪಿಯ ಕೆಲ ಶಾಸಕರು ನಮ್ಮೊಡನೆ ಬರಲು ರೆಡಿಯಾಗಿದ್ದರು. ಆದರೆ ನಾವು ಬೇಡಪ್ಪ ಅಲ್ಲೇ ಇರಿ. ಜನ ಸಮ್ಮಿಶ್ರ ಸರಕಾರವನ್ನು ಬಯಸಿದ್ದಾರೆ. ಅದರಂತೆ ಸಮ್ಮಿಶ್ರ ಸರಕಾರ ನಡಿತಿದೆ ಅಂತಾ ಹೇಳಿದ ಅವರು,  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರತಿಕ್ರಿಯಿಸಿ, ಉತ್ತರ, ದಕ್ಷಿಣ ಎಂತೇನೂ ಇಲ್ಲ. ಕರ್ನಾಟಕವನ್ನು ನಾನು ಅಖಂಡ ಕರ್ನಾಟಕವಾಗಿ ಕಾಣುತ್ತೇನೆ. ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ ಹೋರಾಟ ಮಾಡುವುದರಲ್ಲಿ ತಪ್ಪೇನಿಲ್ಲ ಎಂದರು.

Leave a Reply

Your email address will not be published.