ಜೆಡಿಎಸ್ ಬಿಜೆಪಿಯಲ್ಲಿ ವಿಲೀನಗೊಂಡಿದೆ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ


ಕೊಪ್ಪಳ: ಜೆಡಿಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ, ಜೆಡಿಎಸ್ ಬಿಜೆಪಿ ಪಕ್ಷಗಳು ಯಾವತ್ತಿದ್ರೂ ಕಾಂಗ್ರೆಸ್ ವಿರೋಧಿಗಳು. ಇಲ್ಲಿನ ಜೆಡಿಎಸ್ ಪಕ್ಷ ಕೋಮುವಾದಿ ಬಿಜೆಪಿ ಪಕ್ಷದೊಂದಿಗೆ ವಿಲೀನಗೊಂಡಿದೆ. ತಮ್ಮ ಬೆಂಬಲಿಗರು ನಗರಸಭೆಯಲ್ಲಿ ಆಡಳಿತ ನಡೆಸುತ್ತಿದ್ದ ಹಿಂದಿನ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅನ್ಸಾರಿ ಹೇಳಿದರು.

ಗಂಗಾವತಿ ನಗರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಬಂದ್ರೆ ದುರಾಡಳಿತ ನಡೆಯುತ್ತೆ. ಬಿಜೆಪಿಯನ್ನು ಗೆಲ್ಲಿಸೋ ಸಲುವಾಗಿ ಜೆಡಿಎಸ್ ಹುಟ್ಟಿಕೊಂಡಿದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಹಾಗೂ ಮಾಜಿ ಸಂಸದ ಶಿವರಾಮಗೌಡ ಅವರು ನಗರಸಭೆ ಚುನಾವಣೆಗೆ ಸಂಬಂಧಿಸಿದಂತೆ ಗುರುವಾರ ಸಂಜೆ ಅನ್ಸಾರಿಯವರ ಗೃಹ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಗಂಗಾವತಿಯಲ್ಲಿರುವ ಜೆಡಿಎಸ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗಿದೆ ಇಲ್ಲಿರುವುದು ನಿಜವಾದ ಜೆಡಿಎಸ್ ಪಕ್ಷ ಅಲ್ಲ.ಈ ಎರಡೂ ಪಕ್ಷಗಳಿಂದ ಪಾರದರ್ಶಕ ಆಡಳಿತ ಮತ್ತು ಅಭಿವೃದ್ಧಿ ಕನಸಿನ ಮಾತು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಖಡಕಾಗಿ ಹೇಳಿದ್ದಾರೆ.

ಬಿಜೆಪಿಗೆ ಖೋ ಕೊಟ್ಟು ಜೆಡಿಎಸ್ ಮನೆಯಲ್ಲಿ ಕೂಡುತ್ತೆ. ಈ ಕಾರಣಕ್ಕೆ ಕಾಂಗ್ರೆಸ್ನ್ನು ತಾವೇಲ್ಲರು ಬೆಂಬಲಿಸಬೇಕು. ಜೆಡಿಎಸ್ ಟಿಕೆಟ್ ಭಾರೀ ಸುಲಭ ಸಿಗುತ್ತೆ. ಅದೇನು ದೊಡ್ಡ ಮಾತು ಅಲ್ಲ. ಆದ್ರೆ ಎಲೇಕ್ಷನ್ ಆಗಿದ ಮೇಲೆ ಪಕ್ಷಕ್ಕೆ ಬಾಗಿಲು ಹಾಕ್ತಾರೆ ಇದು ಜೆಡಿಎಸ್ ಚಾಳಿ. ಜೆಡಿಎಸ್ ಪಕ್ಷವನ್ನು ನಂಬಬೇಡಿ ಎಂದು ವಾಗ್ದಾಳಿ ನಡೆಸಿದ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ. ಅನ್ಸಾರಿ ಹಾಗೂ ಶಿವರಾಮಗೌಡರ ವಾಗ್ದಾಳಿಯಿಂದ ಸಮ್ಮಿಶ್ರ ಸರ್ಕಾರದ ಪಾಲುದಾರ ಜೆಡಿಎಸ್ ಗೆ ಇರುಸು-ಮುರುಸು ಉಂಟಾಗಿದೆ.

ಮಾಜಿ ಸಂಸದ, ಮಾಜಿ ಶಾಸಕರ ಈ ಹೇಳಿಕೆ ಈಗ ರಾಜ್ಯದಲ್ಲಿ ಹೆಚ್ಚು ಸುದ್ದಿಯನ್ನು ಮಾಡುತ್ತಿದೆ, ಗಂಗಾವತಿ, ಯಲಬುರ್ಗಾದಲ್ಲಿ ಕಾಂಗ್ರೆಸ್ ಸೋಲಿಸುವ ಉದ್ದೇಶದಿಂದ ಹಾಗೂ ಬಿಜೆಪಿಗೆ ಅನುಕೂಲವಾಗಲು ಡೇಮ್ಮಿ ಅಭ್ಯರ್ಥಿಗಳನ್ನು ಹಾಕಿದ ಸಿ.ಎಂ. ಕುಮಾರಸ್ವಾಮಿ ಯಿಂದ ಕಾಂಗ್ರೆಸ್ ಹೆಚ್ಚು ಹಾನಿಯಾಗಲಿದೆ ಎಂದಿದ್ದಾರೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಿಷ್ಠೆಯಿಂದ ಕಾಂಗ್ರೆಸ್ಸಿಗೆ ದುಡಿದವರಿಗೆ ಮತ್ತು ಆರ್ಥಿಕ ಬಲಿಷ್ಠ,ವಾರ್ಡಿನ ಜನರೊಂದಿಗೆ ಉತ್ತಮ ಬಾಂಧವ್ಯ ಈ ಮೂರು ಪ್ರಮುಖ ಮಾನದಂಡದಡಿ ನಗರ ಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಲಾಗುವುದು ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಬಸವರಾಜ ಸ್ವಾಮಿ ಮಳೇಮಠ,ರುದ್ರಶ ಡ್ಯಾಗಿ,ಬಸವರಾಜ ರಾಮತ್ನಾಳ್,ರಾಜು ನಾಯಕ,ನವಾಬ್ ಸಾಬ್,ಶರಣೇಗೌಡ,ನಾಗರಾಜ ನಂದಾಪೂರ,ಅಂಬಣ್ಣ,ಮಲ್ಲೇಶಪ್ಪ,ಮಹೇಶ ಸಾಗರ್, ಗದ್ವಾಲ್ ಖಾಸೀಮ್ ಸಾಬ್,ರಾಮಣ್ಣ ಬಳ್ಳಾರಿ,ಅಮರಜ್ಯೋತಿ ನರಸಪ್ಪ,ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಶ್ಯಾಮೀದ್ ಮನಿಯಾರ್,ನಗರ ಸಭೆ ಮಾಜಿ ಸದಸ್ಯರಾದ ಈ.ರಾಮಕೃಷ್ಣ,ಮನೋಹರಸ್ವಾಮಿ ಹಿರೇಮಠ,ರಾಜು ಬಿ.ಲಿಂಗರಾಜ,ಹುಸೇನ ಪೀರ ಅನೇಕರಿದ್ದರು.

ಚುನಾವಣೆಯಲ್ಲಿ ಸ್ವತಃ ತಾವು ಬೀದಿಗಳಿದು ಹಿಂದಿನ ಆಡಳಿತ ಮತ್ತು ತಾವು ಶಾಸಕರಿದ್ದ ಅವಧಿಯಲ್ಲಿ ಮಾಡಿದ ನಾನಾ ಅಭಿವೃದ್ಧಿ ಕೆಲಸಗಳನ್ನು ಮತದಾರರಿಗೆ ಮನವರಿಕೆ ಮಾಡುವ ಮೂಲಕ 30 ವಾರ್ಡುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ನಗರ ಸಭೆ ಕಛೇರಿ ಮೇಲೆ ಮತ್ತೆ ಕಾಂಗ್ರೆಸ್ ಭಾವುಟ ಹಾರಿಸುತ್ತೇನೆ ಎಂದು  ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು. 

ಜೆಡಿಎಸ್, ಬಿಜೆಪಿ ಮುಖಂಡರು ಒಂದೇ: ಗಂಗಾವತಿಯಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಇವುಗಳಿಂದ ಅಭಿವೃದ್ಧಿ ಕಾಣಲು ಅಸಾಧ್ಯ. ತಮ್ಮ ಅಲಕ್ಷತನದಿಂದ ಕಳೆದ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ತಪ್ಪಿಸಿಕೊಂಡು ಸಾಕಷ್ಟು ಅನುಭವ ಪಟ್ಟಿರುವೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದವರನ್ನು ನಗರ ಸಭೆಯಲ್ಲಿ ಸೋಲಿಸಲು ಕಾಂಗ್ರೆಸ್ ಕಾರ್ಯಕರ್ತರು ಪಣ ತೊಡಬೇಕು ಎಂದು ಮಾಜಿ ಸಂಸದ ಶಿವರಾಮಗೌಡ ಕಾರ್ಯಕರ್ತರಿಗೆ ಕರೆ ನೀಡಿದರು. 

Leave a Reply

Your email address will not be published.