ಗೋಕಾಕ: ವಿದ್ಯೆ ಕಲಿಸಿಕೊಡಬೇಕಾದ ಶಿಕ್ಷಕ ಶಾಲಾ ಮಕ್ಕಳ ಕೈಯಲ್ಲಿ ಬೈಕ್ ಹಾಗೂ ಶೌಚಾಲಯ ಕ್ಲೀನ್ ಮಾಡಿಸಿದ ಘಟನೆ ಗೋಕಾಕ ತಾಲೂಕಿನ ಬಡಗಿವಾಡ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ಸದ್ಯ ಮಕ್ಕಳು ಶೌಚಾಲಯ ತೊಳೆಯುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಗೋಕಾಕ ತಾಲೂಕಿನ ಬಡಗಿವಾಡ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಜಯಪಾಲ್ ಭಜಂತ್ರಿ ಮಕ್ಕಳ ಕೈಯಲ್ಲಿಯೇ ದಿನನಿತ್ಯ ಶಾಲೆಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಬಿಸಿಯೂಟದ ಪಾತ್ರೆಗಳನ್ನು ಮಕ್ಕಳೇ ಪಾಳೆ ಪ್ರಕಾರ ತೊಳದಿಡಬೇಕಿದೆ. ಶೌಚಾಲಯ ಹಾಗೂ ಶಿಕ್ಷಕನ ಬೈಕನ್ನು ಮಕ್ಕಳು ಶುಚಿಗೊಳಿಸುತ್ತಾರೆ.
ಮಕ್ಕಳು ಶೌಚಾಲಯಮ , ಬೈಕ್ ತೊಳೆಯುತ್ತಿರುವ ದೃಶ್ಯಗಳನ್ನು ಸ್ಥಳೀಯರೊಬ್ಬರು ಮೊಬೈಲ್ ಚಿತ್ರೀಕರಿಸಿದ್ದಾರೆ. ಸದ್ಯ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಿಕ್ಷಕನ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.