ಕಸಿ ಮಾಡಿದ ಗರ್ಭಾಶಯದಿಂದ ಜನಿಸುತ್ತಿದೆ ಮಗು !!


ಪುಣೆ (ಮಹಾರಾಷ್ಟ್ರ): ಗರ್ಭಾಶಯ ಕಸಿ ಮಾಡಿಸಿಕೊಂಡಿರುವ ಮಹಿಳೆಯೊಬ್ಬರು ಶೀಘ್ರದಲ್ಲಿಯೇ ತಾಯಿಯಾಗಲಿದ್ದು, ಕಸಿ ಗರ್ಭಾಶಯದಿಂದ ಮಗು ಪಡೆದ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ !

ವಿಶೇಷವೆಂದರೆ ಈ ಗರ್ಭಾಶಯವನ್ನು ಕೊಟ್ಟವರು ಬೇರೆ ಯಾರೂ ಅಲ್ಲ, ಸ್ವತಃ ಮಹಿಳೆಯ ತಾಯಿ !!

ಪುಣೆಯ ಗ್ಯಾಲಾಕ್ಸಿ ಕೇರ್ ಆಸ್ಪತ್ರೆಯಲ್ಲಿ 27 ವರ್ಷದ ಮಹಿಳೆಗೆ ಗರ್ಭಾಶಯ ಕಸಿ  ಮಾಡಲಾಗಿತ್ತು. ಇದೀಗ ಆ ಮಹಿಳೆ 20 ವಾರದ ಗರ್ಭಣಿಯಾಗಿದ್ದಾಳೆ.

ಈ ಮಹಿಳೆಗೆ ಹುಟ್ಟುವಾಗಲೇ ಗರ್ಭಾಶಯವಿರಲಿಲ್ಲ ಎಂದು ಆಸ್ಪತ್ರೆಯ ವೈದ್ಯ ಡಾ. ಶೈಲೇಶ ಪುಂಟಾಂಬೇಕರ ತಿಳಿಸಿದ್ದಾರೆ.

ಮಹಿಳೆಯ ತಾಯಿಯ ಗರ್ಭಾಶಯವನ್ನು ಇದೀಗ ಕಸಿ ಮಾಡಲಾಗಿದ್ದು, ಈ ಗರ್ಭಾಶಯದಿಂದ  20 ವರ್ಷಗಳಿಂದ  ಹೆರಿಗೆಯಾಗಿಲ್ಲ. ಕಸಿ ಮಾಡುವ ಶಸ್ತ್ರಚಿಕಿತ್ಸೆ ಸುಲಭವಾಗಿರಲಿಲ್ಲವಾದರೂ ಎಚ್ಚರಿಕೆಯಿಂದ ಮಾಡಲಾಗಿದೆ ಎಂದೂ ಅವರು ತಿಳಿಸಿದರು.

ತಾನು ತಾಯಿಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮಹಿಳೆ ತಾನು ಜನಿಸಿದ ಗರ್ಭಾಶಯದಿಂದಲೇ ತನ್ನ ಮಗುವೂ ಜನಿಸುತ್ತಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.

Leave a Reply

Your email address will not be published.