ಸಂಸತನಲ್ಲಿ ಸರ್ವಾಧಿಕಾರಿ ಹಿಟ್ಲರ್ ಗೆಟಪ್ ನಲ್ಲಿ ಟಿಡಿಪಿ ಸಂಸದ


ಹೊಸದಿಲ್ಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಒತ್ತಾಯಿಸಿ ತೆಲುಗು ದೇಶಂ ಪಕ್ಷದ ಸಂಸದರ ಧರಣಿ ಲೋಕಸಭೆಯಲ್ಲಿ ಇಂದು ಮುಂದುವರೆದಿದ್ದು,  ಸರ್ವಾಧಿಕಾರಿ ಹಿಟ್ಲರ್ ಗೆಟಪ್ ನಲ್ಲಿ ಟಿಡಿಪಿ ಸಂಸದರೊಬ್ಬರು ಇಂದು ಸಂಸತ್ ಭವನ ಪ್ರವೇಶಿದರು.

ಬೇರೆ ಬೇರೆ ವೇಷ ಧರಿಸಿ ಗಮನ ಸೆಳೆಯುತ್ತಿರುವ ಚಿತ್ತೂರ ಸಂಸದ ನರಮಲ್ಲಿ ಶಿವಪ್ರಸಾದ ಇಂದು ಅಡಾಲ್ಪ್ ಹಿಟ್ಲರ್ ಬಂಗಿಯಲ್ಲಿ ಧರಣಿಯಲ್ಲಿ ಪಾಲ್ಗೊಂಡರು. 

ಈ ಹಿಂದೆ ಖ್ಯಾತ ನಟರು ಕೂಡರಾಗಿದ್ದ ಸಂಸದ ನರಮಲ್ಲಿ ಅವರು, ಸತ್ಯ ಸಾಯಿ ಬಾಬಾ, ನಾರದಮಣಿ, ವಿದ್ಯಾರ್ಥಿ ಚಕ್ಕಡಿ ಓಡಿಸುವವನ ಮತ್ತು ಇನ್ನಿತರ ವೇಷ ಧರಿಸಿದ್ದರು. 

ಶಿವಪ್ರಸಾದ್ ಅವರು ತೆಲುಗು ಚಿತ್ರರಂಗದಲ್ಲಿ ಖಲನಾಯಕ್ ಪಾತ್ರಗಳಲ್ಲಿ ಮಿಂಚಿದ್ದರು.  2009 ರ ಚುನಾವಣೆಯಲ್ಲಿ ಅವರು ಆಂಧ್ರಪ್ರದೇಶದ ಚಿತ್ತೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.

Leave a Reply

Your email address will not be published.