ಲಚ್ಯಾಣ-ಬರಗೂಡಿ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಎಸಿಗೆ ಮನವಿ


ಇಂಡಿ: ತಾಲೂಕಿನ  ಲಚ್ಯಾಣ- ಬರಗೂಡಿ ಗ್ರಾಮದ ನಡುವಿನ ರಸ್ತೆ ಒತ್ತುವರಿಯಾಗಿದ್ದು, ಅಧಿಕಾರಿಗಳು ಸರ್ವೇ ನಡೆಸಿ  ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ಮಂಗಳವಾರ ಎಸಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಆಗಮಿಸಿದ ಗ್ರಾಮಸ್ಥರು ಎಸಿ ಡಾ. ರಾಜ್. ಪಿ.  ಅವರಿಗೆ ಮನವಿ ಸಲ್ಲಿಸಿದರು.

ಲಚ್ಯಾಣ- ಬರಗೂಡಿ ಗ್ರಾಮದ ಮಧ್ಯೆ ಇರುವ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಈಗಾಗಲೇ ಲಚ್ಯಾಣ ಗ್ರಾಮ ಪಂಚಾಯಿತಿ, ತಹಸೀಲ್ದಾರ್ ಹಾಗೂ ಶಾಸಕ ಯಶವಂತ ಪಾಟೀಲ ಅವರಿಗೂ ಮನವಿ ಸಲ್ಲಿಸಿದರು ಇಲ್ಲಿಯವರೆಗೂ ವರೆಗೂ ಸರ್ವೇ ಕಾರ್ಯ ನಡೆದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಗ್ರಾಮಸ್ಥರು ಇನ್ನು ಒಂದು ವಾರದಲ್ಲಿ ಸಮಸ್ಯೆ ಪರಿಹಾರ ಒದಗಿಸದಿದ್ದಲ್ಲಿ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಲೋಣಿ ಕೆ.ಡಿ. ಗ್ರಾಮದ ಯುವ ಧುರೀಣ ರಮೇಶ ದಾಯಗೋಡೆ, ಲಚ್ಯಾಣ ಗ್ರಾಮಸ್ಥರಾದ ಗೌರಿಶಂಕರ ಬಾಬುಳಗಿ, ಶಿವಾನಂದ ಮುಜಗೊಂಡ, ಎಸ್.ಎಂ. ಮುಜಗೊಂಡ, ವಿಠ್ಠಲ ಚೋರಗಿ, ಪಂಡಿತ ಹತ್ತಳ್ಳಿ, ಶಿವಾನಂದ ಹೂಗಾರ, ಸದಾಶಿವ ಬನಸೋಡೆ, ವಿಠ್ಠಲ ಹತ್ತಳ್ಳಿ, ದಿನೇಶ ಕಾಂಬಳೆ ಇತರರು ಇದ್ದರು.

Leave a Reply

Your email address will not be published.