ಜಮಖಂಡಿ: ಧ್ವಜಾರೋಹಣ ನೆರವೇರಿಸುವ ಕುರಿತು ತರಬೇತಿ ಕಾರ್ಯಾಗಾರ


ಜಮಖಂಡಿ: ಧ್ವಜ ನೀತಿ ಸಂಹಿತೆಯನ್ನು ಅಚ್ಚು ಕಟ್ಟಾಗಿ ಪಾಲಿಸದೆ ಹೋದರೆ ದೇಶಕ್ಕೆ ಅವಮಾನ ಮಾಡಿದಂತೆ ಎಂದು ತಹಶೀಲ್ದಾರ ಪ್ರಶಾಂತ ಚನಗೊಂಡ ಹೇಳಿದರು.

ತಹಶೀಲ್ದಾರ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕುರಿತಂತೆ ಧ್ವಜನೀತಿಸಂಹಿತೆ ಕುರಿತು ತರಬೇತಿಯಲ್ಲಿ ಮಾತನಾಡಿ, ಶಾಲಾ ಕಾಲೇಜುಗಳು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸರಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸುವ ಮೊದಲು ಧ್ವಜನೀತಿಸಂಹಿತೆಯ ಬಗ್ಗೆ ಅರಿತು ಧ್ವಜಾರೋಹಣ ನೆರವೇರಿಸಬೇಕು. ಪ್ರತಿ ವರ್ಷ ಭಾರತ ಸೇವಾದಳದಿಂದ ತರಬೇತಿಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ತರಬೇತಿಯಿಂದ ಜಾರೋಹಣದ ವೇಳೆ ಆಗುವಂತಹ ಲೋಪ- ದೋಶಗಳನ್ನು ತಡೆಗಟ್ಟಬಹುದು ಎಂದರು.

ತರಬೇತುದಾರ ಭಾರತ ಸೇವಾದಳದ ಜಿಲ್ಲಾ ಸಂಘಟಿಕ ಮಹೇಶ ಪತ್ತಾರ ಧ್ವಜಾರೋಣದ ಬಗ್ಗೆ ಮಾಹಿತಿ ನೀಡಿದರು.

ಭಾರತ ಸೇವಾದಳದ ತಾಲೂಕಾ ಸಂಘಟಕ ಸಮೀರ ಕಂಗನೊಳ್ಳಿ, ತಾಪಂ ಇಒ ಪಾಟೀಲ, ತಲೂಕಾ ಧೈಹಿಕ ಶಿಕ್ಷಣಾಧಿಕಾರಿ ಕೆ ಬಿ.ತಲಬಕನವರ, ಎಂ ಕೆ.ಮೇಗಾಡಿ, ಡಿ ಬಿ.ಭೊವಿ, ಬಿ ಎಸ್.ಸಿಂಧೂರ, ಭಗವಾನ ಗುಳನ್ನವರ ಸೇರಿ ನಗರದ ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು, ಧೈಹಿಕ ಶಿಕ್ಷಕರು ಮತ್ತು ಸ್ಥಳೀಯ ಸಂಘ ಸಂಸ್ಥೆಯ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published.