ಜಮಖಂಡಿ: ಧ್ವಜಾರೋಹಣ ಮರೆತ ಮಹಾರಾಷ್ಟ್ರ ಬ್ಯಾಂಕ


ಜಮಖಂಡಿ: ಪರಕೀಯರ ದುರಾಡಳಿತದಿಂದ ಹಲವಾರು ಮಹಾನ ನಾಯಕರ ಸಾವು ನೋವಿನಿಂದ 1947 ಆಗಸ್ಟ 15 ರಂದು ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಅಂದಿನಿಂದ ಇಲ್ಲಿಯವರೆಗೆ ನಾವೆಲ್ಲರೂ ಪ್ರತಿ ವರ್ಷ ತ್ಯಾಗ ಬಲಿದಾನ ಮಾಡಿದ ನಾಯಕರನ್ನು ನೆನಪಿಸುತ್ತಾ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಭ್ರಮಾಚರಣೆ ಮಾಡುವದು ನಮ್ಮೆಲ್ಲರ ಕರ್ತವ್ಯ. ಆದರೆ ಇತ್ತಿಚಿನ ಬೆಳವಣಿಗೆಯನ್ನು ಗಮನಿಸಿದರೆ ಕೆಲವಂದಿಷ್ಟು ದೇಶ ದ್ರೋಹಿಗಳು ದೇಶ ಹಾಗೂ ದ್ವಜಾರೋಹಣಕ್ಕೆ ಅವಮಾನ ಮಾಡುತ್ತಿರುವದು ಬಹಳ ಕೇಡಕರವಾದ ಸಂಗತಿ ಇದಕ್ಕೆ ತಾಜಾ ಉದಾಹರಣೆ ತಾಲೂಕಿನ ತೋದಲಬಾಗಿ ಗ್ರಾಮದ ಮಹಾರಾಷ್ಟ್ರ ಬ್ಯಾಂಕ್‍ನಲ್ಲಿ ದ್ವಜಾರೋಹಣ ಮಾಡದೇ ಇರುವದು.

ಪ್ರತಿಯೊಂದು ಸಂಘ ಸಂಸ್ಥೆಗಳು, ಶಾಲಾ ಕಾಲೇಜ್‍ಗಳು ಇನ್ನಿತರ ಸರಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ದ್ವಜಾರೋಹನವನ್ನು ಮಾಡಬೇಕು. ಆದರೆ ಇಲ್ಲಿನ ಸಿಬ್ಬಂದಿ ತಮ್ಮ ಬೇಜವಾಬ್ದಾರಿತನದಿಂದ ದ್ವಜಾರೋಹಣವನ್ನು ಮಾಡದೇ ಇರುವದಕ್ಕೆ ಬ್ಯಾಂಕ್ ವಿರುದ್ಧ ಗ್ರಾಮದ ಜನರು ಕೆಂಡಾಮಂಡಲವಾಗಿದೂರುತ್ತಿದ್ದಾರೆ.
ಬ್ಯಾಂಕ ನೌಕರರ ಬೇಜವಬ್ದಾರಿತನ ಹಾಗು ಇವರ ಉದ್ದಟತಣ ವರ್ತನೆ ಸಾರ್ವಜನಿಕ ವಲಯದಲ್ಲಿ ಬೇಸರ ತಂದಿದೆ. ದೇಶಕ್ಕೆ ಅವಮಾನಗೈಯುವ ನೌಕರರು ಸರ್ಕಾರಕ್ಕೆ ಅವಶ್ಯಕತೆ ಇದೆಯಾ ? ಇವರಿಗೆ ಯಾರು ಹೆಳೋರು, ಕೇಳೊರು ಇಲ್ಲವಾ ? ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ. ಇಷ್ಟೆಲ್ಲ ಘಟನೆ ನಡೆದಿದ್ದರೂ ಸಂಬಂದಪಟ್ಟ ಮೇಲಾಧಿಕಾರಿಗಳು ಹಾಗು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವದು ಬಹಳ ನಾಚಿಕೆಗೆಡಿನ ಸಂಗತಿ.
ನಮ್ಮ ದೇಶದಲ್ಲಿ ಒಬ್ಬ ಜನಸಾಮಾನ್ಯರಿಂದ ಹಿಡಿದು ದೇಶದ ಪ್ರಧಾನಿಯವರೆಗೆ ಪ್ರತಿ ವರ್ಷ ಧ್ವಜಾರೋಹಣವನ್ನು ಆಚರಿಸಿ ಅದಕ್ಕೆ ಗೌರವ ಸಲ್ಲಿಸುತ್ತೆವೆ. ಆದರೆ ಅಕ್ಷರಸ್ಥರಾಗಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು ಧ್ವಜಾರೋಹಣ ಮಾಡದೆ ಇರುವವರ ಮೇಲೆ ಸಂಬಂದಪಟ್ಟ ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ಶೀಘ್ರದಲ್ಲಿಯೇ ಕಾನೂನು ಕ್ರಮ ಕೈಗೊಂಡು ಇಂತಹ ದೇಶದ್ರೋಹಿಗಳಿಗೆ ಬುದ್ದಿ ಕಲಿಸಬೇಕಾಗಿರುವದು ಅವಶ್ಯವಾಗಿದೆ.
ನಾವು ಆಚರಣೆ ಮಾಡುವದಿಲ್ಲ ಮೇನ್ ಬ್ರ್ಯಾಂಚ್ ವಿಜಯಪೂರದಲ್ಲಿ ಮಾತ್ರ ಆಚರಿಸುತ್ತೆವೆ. ಕಳೆದ ಹತ್ತು ವರ್ಷಗಳಿಂದ ತೋದಲಬಾಗಿ ಗ್ರಾಮದ ಬ್ಯಾಂಕಿನಲ್ಲಿ ಆಚರಣೆ ಮಾಡಿಲ್ಲ. ಅದಕ್ಕಿಂತ ಮೋದಲು ಹಾರಿಸಿರಬಹುದು ಎಂದು ಶಿವಕುಮಾರ ಮುಖ್ಯ ಕಛೇರಿ ವ್ಯವಸ್ಥಾಪಕ ಹರಕೆ ಉತ್ತರ ನೀಡಿದ್ದಾರೆ.
ಪ್ರತಿಯೊಂದು ಸರಕಾರಿ ಕಛೇರಿಗಳು, ಸಂಘಸಂಸ್ಥೆಗಳು ಕಡ್ಡಾಯವಾಗಿ ದ್ವಜಾರೋಹನವನ್ನು ಆಚರಣೆ ಮಾಡಬೇಕು. ಆದರೆ ತೋದಲಬಾಗಿಯಲ್ಲಿ ಯಾಕೆ ಆಚರಣೆ ಮಾಡಿಲ್ಲ ಎಂಬುವದನ್ನು ತಿಳಿದು ಅವರಿಗೆ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ತೆಗೆದುಕೊಳಲಾಗುತ್ತದೆ ಎಂದು ಉಪತಹಶೀಲ್ದಾರ ವಾಯ್.ಎಚ್. ದ್ರಾಕ್ಷಿ ತಿಳಿಸಿದರು.

Leave a Reply

Your email address will not be published.