ಸಕಲ ಸರಕಾರಿ ಗೌರವದೊಂದಿಗೆ ಕರುಣಾನಿಧಿ ಅಂತ್ಯಕ್ರಿಯೆ


ಚೆನ್ನೈ (ತಮಿಳುನಾಡು): ದೀರ್ಘ ಕಾಲದ ಅನಾರೋಗ್ಯದಿಂದ ಬಳಲಿ ನಿನ್ನೆ ಸಂಜೆ ವಿಧಿವಶರಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರಕಾರಿ ಮರ್ಯಾದೆಯೊಂದಿಗೆ ಬುಧವಾರ ಸಂಜೆ ನೆರವೇರಿತು.

ನಾಲ್ಕು ಗಂಟೆ ಸುಮಾರಿಗೆ ರಾಜಾಜಿ ಹಾಲ್ ನಿಂದ ಕರುಣಾನಿಧಿ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಸುಮಾರು 2-3 ಕಿ.ಮೀ ದೂರದ ಮರೀನಾ ಬೀಚ್ ಗೆ ಕೊಂಡೊಯ್ಯಲಾಯಿತು.

ಅಲ್ಲಿ ಸಕಲ ವಿಧಿವಿಧಾನ ನೆರವೇರಿಸಿದ ಮೇಲೆ ಸಕಲ ಸರಕಾರಿ ಗೌರವಗಳೊಂದಿಗೆ ಪಾರ್ಥಿವ ಶರೀರದ ಸಮಾಧಿ ಮಾಡಲಾಯಿತು.

ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವೀರಪ್ಪ ಮೊಯ್ಲಿ, ಸೀತಾರಾಮ ಯಚೂರಿ,  ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಅಗ್ರಗಣ್ಯ ನಾಯಕರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.