ಕೇರಳ: ಭಾರೀ ಮಳೆಗೆ 20 ಬಲಿ !


ಎರ್ನಾಕುಲಂ / ತ್ರಿವೇಂದ್ರಮ್ (ಕೇರಳ): ಮಳೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಗುರುವಾರ ಕೇರಳದಲ್ಲಿ  20 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಈ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಸುಮಾರು 22 ಆಣೆಕಟ್ಟೆಗಳಿಂದ ನೀರು ಹೊರ ಹರಿಸಲಾಗುತ್ತಿದೆ.

ಮಿಲಿಟರಿ ಪಡೆಗಳು, ನೌಕಾಪಡೆ, ಕರಾವಳಿ ಭದ್ರತಾ ಸಿಬ್ಬಂದಿ ಅಲ್ಲದೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಹಾಯವನ್ನೂ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ರಾಜ್ಯದ ಇನ್ನಷ್ಟು ಆಣೆಕಟ್ಟೆಗಳ ಗೇಟುಗಳನ್ನು ತೆರೆಯಲಾಗುವುದು ಎಂದೂ ಅವರು ತಿಳಿಸಿದ್ದಾರೆ.

 

Leave a Reply

Your email address will not be published.