ಅನುದಾನ ಬಿಡುಗಡೆಯಾದರು ಬಾಲ್ಯ, ಕಿಶೋರಾವಸ್ಥೆ ಕಾರ್ಮಿಕರಿಗೆ ಇಲ್ಲ ಪುರ್ನವಸತಿ


-ಜಿಲ್ಲೆಯಲ್ಲಿ 120 ಬಾಲಕಾರ್ಮಿಕರು ಪತ್ತೆ|ಬಾಲಕಾರ್ಮಿಕರನ್ನು ಗುರುತಿಸುವ ಹೊಣೆಹೊತ್ತ ತಂಡಗಳು ನಿಷ್ಕ್ರೀಯ

ಕೊಪ್ಪಳ: ಪ್ರತಿ ಜಿಲ್ಲೆಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) 1986 ಕಾಯ್ದೆ ಹಾಗೂ ಅದರಡಿ ನಿಯಮಗಳನ್ವಯ ಕೆಲಸದಿಂದ ಬಿಡುಗಡೆಗೊಂಡ ಮಕ್ಕಳಿಗಾಗಿ ಒಂದು ವಿಶೇಷ ತರಬೇತಿ ಕೇಂದ್ರವನ್ನು ಕನಿಷ್ಠ 15 ರಿಂದ 50 ಮಕ್ಕಳಿಗಾಗಿ ಆರಂಭಿಸಲು ಸರ್ಕಾರದ ಆದೇಶವಿದ್ದರೂ ಸಹ ಇದುವರೆಗೂ ಕೊಪ್ಪಳ ಜಿಲ್ಲೆಯಲ್ಲಿ ಆರಂಭಿಸಿರುವದಿಲ್ಲ.

2017-18ನೇ ಸಾಲಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರಿಗಾಗಿ ವಿಶೇಷ ತರಬೇತಿ ಕೇಂದ್ರಗಳನ್ನು ಆರಂಭಿಸಲು ಕಾರ್ಮಿಕ ಆಯುಕ್ತರು 2018 ಜ. 16 ರಂದು ಹೊರಡಿಸಿದ ಆದೇಶದಲ್ಲಿ ಅನುಮೋದನೆಯನ್ನು ನೀಡಿ, 3,93,26,500 ರೂ. ಗಳ ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ. ಅದರಲ್ಲಿ ಒಂದು ಕೇಂದ್ರಕ್ಕೆ ರೂ. 11,85,000 ರೂ. ಗಳನ್ನು ಒದಗಿಸಿದೆ.

ಜಿಲ್ಲೆಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) 1986 ಕಾಯ್ದೆ ಹಾಗೂ ಅದರಡಿ ನಿಯಮಗಳನ್ವಯ ಕೆಲಸದಿಂದ ಬಿಡುಗಡೆಗೊಂಡ ಮಕ್ಕಳಿಗಾಗಿ ಒಂದು ವಿಶೇಷ ತರಬೇತಿ ಕೇಂದ್ರವನ್ನು ಕನಿಷ್ಠ 15 ರಿಂದ 50 ಮಕ್ಕಳಿಗಾಗಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಒಂದಕ್ಕಿಂತ ಹೆಚ್ಚು ವಿಶೇಷ ಕೇಂದ್ರಗಳ ನಡೆಸುವ ಅವಶ್ಯಕತೆ ಇದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿ ಅನುಮೋದನೆಯನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ.

ಜಿಲ್ಲೆಯಲ್ಲಿ ಅಧಿಕೃತವಾಗಿ ಪುನರ್ ಪರಿಶೀಲನೆಯಲ್ಲಿ ಪತ್ತೆ ಹಚ್ಚಲಾಗಿರುವ ಸುಮಾರು 120 ಮಕ್ಕಳಿಗೆ ಜಿಲ್ಲೆಯಲ್ಲಿ ವಿಶೇಷ ತರಬೇತಿ ಕೇಂದ್ರಗಳನ್ನು ಶಾಲೆಗಳನ್ನು ಆರಂಭಿಸಬೇಕಾಗಿದೆ. ಈ ಸಂಬಂಧವಾಗಿ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಹಾಗೂ ಅನುದಾನ ಕೂಡ ಬಿಡುಗಡೆಯಾಗಿರುತ್ತದೆ. ಸ್ವಯಂ ಸಂಸ್ಥೆಗಳ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಬೇಕಾಗಿದೆ.  12ಕ್ಕೂ ಹೆಚ್ಚು ಸಂಸ್ಥೆಗಳಿಂದ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ನಿಯಾಮಾನುಸಾರ ಮಂಜೂರಾತಿ ನೀಡಲು ಜಿಲ್ಲಾಧಿಕಾರಿಗಳಿಗೆ ಕಾರ್ಮಿಕ ಆಯುಕ್ತರು ಅಧಿಕಾರವನ್ನು ನೀಡಿರುತ್ತಾರೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 17 ಜುಲೈನಲ್ಲಿ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸಭೆಯಲ್ಲಿ ಬಾಲ ಕಾರ್ಮಿಕರಿಗೆ ಪುರ್ನವಸತಿ ಒದಗಿಸಲು ಸರ್ಕಾರದ ಸೂಚನೆಗಳನ್ವಯ ಕೇಂದ್ರಗಳನ್ನು ತೆರೆದು ನಡೆಸಲು ಸರ್ಕಾರೇತರ ಸಂಸ್ಥೆಗಳನ್ನು ಆಯ್ಕೆ ಮಾಡಿ ಮಂಜೂರಾತಿಯನ್ನು ನೀಡಬೇಕಾಗಿತ್ತು. ಆದರೆ ಅಂತಿಮಗೊಳಿಸದ ಕಾರಣ ನೆನೆಗುದ್ದಿಗೆ ಬಿದಿದೆ.  ಪತ್ತೆ ಹಚ್ಚಲಾದ 120 ಬಾಲಕಾರ್ಮಿಕರಿಗೆ ಪುರ್ನವಸತಿ ಭಾಗ್ಯ ದೊರೆಯಬೇಕಾಗಿದೆ. ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲಿ ನಿರಂತರವಾಗಿ ಕೇಂದ್ರಗಳು ನಡೆಯುತ್ತಿವೆ. ಕೊಪ್ಪಳದಲ್ಲಿ ಮಾತ್ರ ಇನ್ನೂ ಆರಂಭಗೊಂಡಿಲ್ಲ.

ಬಾಲಕಾರ್ಮಿಕರನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ವಿಫಲ:

ಇನ್ನೊಂದಡೆ ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಪತ್ತೆ ಹಚ್ಚಿ ಪುನರ್ ವಸತಿ ಕಲ್ಪಿಸುವ ಸಲುವಾಗಿ ತಪಾಸಣೆ ಮಾಡಲು ಮಾಸಿಕ ಗುರಿ ನಿಗದಿ ಪಡಿಸಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಆಗಿರುವ ಎಂ.ಕನಗವಲ್ಲಿ ಅವರು ಜಿಲ್ಲೆಯ ತಹಶೀಲ್ದಾರರು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ಕಾರ್ಮಿಕ ನೀರಿಕ್ಷಕರು ಇವರಿಗೆ 2017 ಆ. 24 ಹಾಗೂ 2018 ನ. 28  ರ ಪತ್ರದ ಆದೇಶದಲ್ಲಿ ತಿಳಿಸಲಾಗಿದ್ದರೂ ಸಹ ಸಂಬಂಧಿಸಿದ ಅಧಿಕಾರಿಗಳು ಬಾಲಕಾರ್ಮಿಕರನ್ನು ಪತ್ತೆ ಹಚ್ಚಿರುವದಿಲ್ಲ ಹಾಗೂ ಇದುವರೆಗೂ ಯಾವುದೇ ಪ್ರಕರಣಗಳನ್ನು ದಾಖಲಿಸಿರುವದಿಲ್ಲ. ಯಾವುದೇ ದಾಳಿ ನಡೆಸಿ ಪ್ರಕರಣ ದಾಖಲಿಸಿದ ಉದಾಹರಣೆಗಳಂತು ಇಲ್ಲವೇ ಇಲ್ಲ. ಇದು ಅಧಿಕಾರಿಗಳ ನಿಷ್ಕಾಲಜಿ ಹಾಗೂ ಬಾಲಕಾರ್ಮಿಕರಿಗೆ ನ್ಯಾಯದೊರಕಿಸಿಕೊಡುವಲ್ಲಿ ತೊರುತ್ತಿರುವ ನಿರಾಶಕ್ತಿ ಸ್ಪಷ್ಟವಾಗಿ ಕಂಡುಬರುತ್ತಿದೆ.

“ಪ್ರಸ್ತುತ ಸರ್ಕಾರದ ಮಾರ್ಗಸೂಚಿಯನ್ವಯ ಒಂದು ಕೇಂದ್ರವನ್ನು ಆರಂಭಿಸಲು ಪ್ರಕ್ರಿಯಲ್ಲಿದ್ದು, ಒಂದಕ್ಕಿಂತ ಹೆಚ್ಚು ಕೇಂದ್ರ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕಾಗಿದೆ. ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು, ನಿಯಾಮಾನುಸಾರ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ – ಬಸವರಾಜ ಹಿರೇಗೌಡ್ರ, ಯೋಜನಾ ನಿರ್ದೇಶಕ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಕೊಪ್ಪಳ”.

ಪ್ರತಿ ದುಡಿಯುವ ಮಗುವನ್ನು ಕೆಲಸದಿಂದ ಬಿಡುಗಡೆಗೊಳಿಸುವಾಗ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ (ಎಸ್) (ಸಿವಿಲ್) ಸಂ :75/2012ರಲ್ಲಿ 2017 ಸೆ. 5 ರಂದು ನೀಡಿರುವ ತೀರ್ಪಿನಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಮಹತ್ವದ ನಿರ್ದೇಶನಗಳನ್ನು ನೀಡಿದೆ.  ಇದನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಲಾಗಿರುತ್ತದೆ. ಹಾಗೂ ಬಾಲನ್ಯಾಯ ಕಾಯ್ದೆ-2015, ಶಿಕ್ಷಣ ಹಕ್ಕು ಕಾಯ್ದೆ,2009. ಜೀತ ಕಾರ್ಮಿಕ ಪದ್ಧತಿ(ನಿಷೇಧ) ಕಾಯ್ದೆ 1976(ಪರಿಸ್ಕೃತ-2016) ಹಾಗೂ ಅನ್ವಯವಾಗುವ ಇತರೆ ಯಾವುದೇ ಕಾಯ್ದೆಗಳು/ನಿಯಮಗಳು/ಸರ್ಕಾರದ ಯೋಜನೆಗಳನ್ನು ದೊರಕಿಸಿಕೊಡಲು ಅವಶ್ಯವಿರುವ ಕ್ರಮಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದ್ದು ಇರುತ್ತದೆ.

-ಮೌಲಾಹುಸೇನ ಬುಲ್ಡಿಯಾರ್,

Leave a Reply

Your email address will not be published.