ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾಂಗ್ರೆಸ್ ಕೊಡುಗೆ ಅಪಾರ: ಅರ್ಜುನ್ ಸಾ ಖಾಟ್ವಾ


ಕೊಪ್ಪಳ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕರೆಲ್ಲರೂ ಮುಂಚುಣಿಯಲ್ಲಿ ಪಾಲ್ಗೊಂಡು ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿ ಭಾರತ ಮಾತೆಯನ್ನು ಸ್ವಾತಂತ್ರ್ಯಗೊಳಿಸಿದ್ದಾರೆ. ಸ್ವಾತಂತ್ರ ಸಂಗ್ರಾಮಕ್ಕೆ ಕಾಂಗ್ರೆಸ್ ನಾಯಕರದು ಮಹಾನ್ ಕೊಡುಗೆ ಇದೆ ಎಂದುರಾಜ್ಯ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಅರ್ಜುನ್ ಸಾ ಖಾಟ್ವಾ ಹೇಳಿದರು.

ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಲಯದಲ್ಲಿ ನಡೆದ ಕ್ವೀಟ್ ಇಂಡಿಯಾ ಚಳುವಳಿಯ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆ. 08, 1942 ರಂದು ಮಹಾತ್ಮಾ ಗಾಂದಿಜೀಯವರು ಮುಂಬಯಿನಲ್ಲಿ (ಬಾಂಬೆ) ಬ್ರಿಟಷ್ ಆಳ್ವಿಕೆಯ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾಂಗ್ರೆಸ್ ನಾಯಕರದು ಅಪಾರ ಕೊಡುಗೆ ಇದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಾಟನ್ ಪಾಷಾ, ಹಿರಿಯ ಮುಖಂಡರುಗಳಾದ ಶಾಂತಣ್ಣ ಮುದುಗಲ್, ದ್ಯಾಮಣ್ಣ ಚಿಲವಾಡಗಿ, ಅಫ್ಸರಸಾಬ್ ಅತ್ತಾರ, ಗವಿಸಿದ್ದಪ್ಪ ಮುದುಗಲ್, ನಾಗರಾಜ ಬಳ್ಳಾರಿ, ನಗರಸಭೆ ಸದಸ್ಯರುಗಳಾದ ಮೌಲಾಹುಸ್ಸೇನ ಜಮೇದಾರ, ಶರಣಪ್ಪ ಚಂದನಕಟ್ಟಿ, ಮಕ್ಬುಲ್ ಸಾಬ್ ಮನಿಯಾರ, ಜಾಕೀರ ಕಿಲ್ಲೇದಾರ, ಮಂಜುನಾಥ ಗೊಂಡಬಾಳ, ಶಿವಾನಂದ ಹೂದ್ಲೂರು, ವೀರಣ್ಣ ಬಂಡಾನವರ, ಅಜ್ಜಪ್ಪ ಸ್ವಾಮಿ, ಮಂಜುನಾಥ ಗಾಳಿ, ಚನ್ನಮ್ಮ, ನೂರಜಾನ್ ಬೇಗಂ, ಉಮಾ ಜನಾದ್ರಿ, ವಕ್ತಾರ ಅಕ್ಬರಪಾಷಾ ಪಲ್ಟನ ಉಪಸ್ಥಿತರಿದ್ದರು.

Leave a Reply

Your email address will not be published.