ಗಂಗಾವತಿ ಕೋಟಾ ನೋಟು ಪ್ರಕರಣ ಈಗ ಸಿಐಡಿ ಅಂಗಳಕ್ಕೆ


ಶಾಸಕ ಪರಣ್ಣ ಮುನವಳ್ಳಿ ಆಪ್ತರೇ ಮಾಡಿದ್ದ ಬ್ಲಾಕ್‌ಮೇಲ್ ಘಟನೆಗೆ ಹೊಸತಿರುವು

-ಕನಕಗಿರಿ ಶಾಸಕ ದಡೆಸೂಗೂರ್ ಆಪ್ತ ಎರ್ರಿಸ್ವಾಮಿ ಬಿಲ್ಗಾರ ಅಂದರ್

ಕೊಪ್ಪಳ : ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಗೆ ಬೆದರಿಕೆ ಪತ್ರ ಹಾಗೂ ಹಣದ ಬೇಡಿಕೆ ಇಟ್ಟಿದ್ದ ಪ್ರಕರಣವೊಂದು ಭಾರಿ ಸುದ್ದಿಯನ್ನೇ ಮಾಡಿತ್ತು.  ಜಿಲ್ಲೆಯ ಪೊಲೀಸರು ತನಿಖೆ ನಡೆಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು, ಆದರೂ ಈಗ ಅದು ಸಿಐಡಿ ತನಿಖೆಗೆ ವರ್ಗಾವಣೆ ಮಾಡಿದ್ದು, ಮತ್ತಷ್ಟು ಕುತೂಹಲಕ್ಕೆ ಕೆರಳಿಸಿದೆ.

ಕಳೆದ ಜೂ. 7, 8 ರಂದು ಗಂಗಾವತಿ ಶಾಸಕರಿಗೆ ಖೋಟಾನೋಟು ನೀಡಿ ಬೆದರಿಕೆ ಹಾಕಲಾಗಿತ್ತು. ಶಾಸಕರು ನೀಡಿದ ದೂರಿನ್ವಯ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಎಸ್ಪಿ ಡಾ. ಅನೂಪ್ ಶೆಟ್ಟಿಯವರು ವಾರದೊಳಗೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದರು. 16 ಜನ ಆರೋಪಿತರಲ್ಲಿ ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಆಪ್ತ ಎರ್ರಿಸ್ವಾಮಿ ಬಿಲ್ಗಾರ ಪ್ರಮುಖ ಆರೋಪಿತ.

ಭತ್ತದ ಕಣಜ ಎಂದು ಖ್ಯಾತಿ ಪಡೆದ ಜಿಲ್ಲೆಯ ಗಂಗಾವತಿ ನಗರ, ಮತ್ತು ತಾಲೂಕು ಸದಾ ರಾಜಕೀಯ, ಸಾಮಾಜಿಕ ಸಂಘರ್ಷ, ಇತ್ಯಾದಿಗಳಿಂದ ಸುದ್ದಿಯಲ್ಲಿದ್ದು, ಇತ್ತಿಚಿಗೆ ಈ ಪ್ರಕರಣವನ್ನು ಭೆಧಿಸುವಲ್ಲಿ ಪೂಲೀಸರು ಯಶಸ್ವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ 10 ಜನ ಆರೋಪಿತರನ್ನು ಬಂಧಿಸಿ ಅವರಿಂದ 500  ರೂ. ಮುಖಬೆಲೆಯ 1.32  ಲಕ್ಷ ಕೋಟಾ ನೋಟು ವಶ ಪಡಿಸಿಕೊಂಡು ತನಿಖೆಯನ್ನು ನಡೆಸಿದ್ದರು.

ಇವರಲ್ಲಿ 3  ಜನ ಸಿಮ್ ಕಾರ್ಡ್ ಮಾರಾಟ ಮಾಡಿದವರಿದ್ದರೆ. 13 ಜನರನ್ನು ಬೆದರಿಕೆ ಹಾಗೂ ಖೋಟಾ ನೋಟು ನೀಡಿದ ಆರೋಪದಡಿ ಬಂಧಿಸಲಾಗಿತ್ತು. 13  ಜನರಲ್ಲಿ ಪ್ರಮುಖವಾಗಿ ಹೊರ ರಾಜ್ಯದಲ್ಲಿ ಖೋಟಾನೋಟು ವ್ಯವಹಾರ, ಪ್ರಿಂಟ್, ಚಲಾವಣೆ ಮಾಡುತ್ತಿದ್ದ ಮೂವರನ್ನು ಚೆನ್ನೈನಲ್ಲಿ ಬಂಧಿಸಿ ಕರೆತರಲಾಗಿತ್ತು.

ಜಿಲ್ಲೆಯ ಪೊಲೀಸರು ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತಿದ್ದರು. ರಾಜ್ಯ ಮಟ್ಟದಲ್ಲಿ ಇದು ಹೆಚ್ಚು ಸುದ್ದಿಯಾಗಿದ್ದರಿಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಇದರ ಉನ್ನತ ಮಟ್ಟದ ತನಿಖೆಗೆ ಸೂಚಿಸಿದ್ದರ ಹಿನ್ನಲೆಯಲ್ಲಿ ಜು. 21ರಂದು ನೀಲಮಣಿರಾಜು ಅವರು ಸಿಐಡಿಗೆ ವರ್ಗಾಯಿಸಲು ಸೂಚಿಸಿದ್ದರು ಎನ್ನಲಾಗಿದೆ. ಈಗ ಅಧಿಕೃತವಾಗಿ ಆದೇಶ ಬಂದಿರುವ ಕಾರಣ ಖೋಟಾ ನೋಟು, ಹಾಗೂ ಶಾಸಕರ ಆಪ್ತರ ಜಾಲ ಜಾಲಿಡಸಲು ಇದು ಸಿಐಡಿ ಅಂಗಳಕ್ಕೆ ಹೋಗಿದೆ.

ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಿದ್ದರಿಂದ ಗಂಗಾವತಿ ಹಾಗೂ ಕನಕಗಿರಿ ಶಾಸಕರಿಗೆ ಮತ್ತು ಅವರ ಆಪ್ತಬಳಗದಲ್ಲಿ ಈಗ ಆತಂಕ ಆರಂಭವಾಗಿದೆ. ಈ ಪ್ರಕರಣದಲ್ಲಿ ಬಿಜೆಪಿಯ ಇಬ್ಬರ ಶಾಸಕರ ಆಪ್ತರೇ ಬಂಧವಾಗಿರುವುದು ವಿಶೇಷವಾಗಿದೆ. ಶಾಸಕ ಮುನವಳ್ಳಿಯಿಂದ ಹಣ ವಸೂಲಿಗಾಗಿ ಎರ್ರಿಸ್ವಾಮಿ ಬಿಲ್ಗಾರ, ಐಸಾಕ್, ಮಹ್ಮದ್ ಆಲ್ ಹಾಗೂ ಮಹ್ಮದ್ ಫಾರೂಕ್ ಪ್ಲಾನ್ ರೂಪಿಸಿದ್ದರು. ಇವರ ಬೆದರಿಕೆ ಬಗ್ಗದೆ ಇದ್ದಾಗ ಖೋಟಾ ನೋಟು ಇಟ್ಟು ನಿಮ್ಮ ಮರ್ಯಾದೆ ತಗೆಯುವುದಾಗಿ ಕೋಬ್ರಾ ಎಂಬ ಹೆಸರಿನಲ್ಲಿ ಪರಣ್ಣ ಅವರಿಗೆ ಪತ್ರ ಬರೆದಿದ್ದರು.

ನಾಲ್ವರು ಖೋಟಾ ನೋಟಿಗಾಗಿ ಬಳ್ಳಾರಿ ನಗರದಲ್ಲಿ ಖೋಟಾನೋಟು ಮಾರಾಟ ಮಾಡುತ್ತಿದ್ದ ವಿಜಯಲಕ್ಷ್ಮೀ ಎಂಬವರು ವ್ಯವಹಾರ ನಡೆಸಿದ್ದರು. ಖೋಟಾ ನೋಟು ನೀಡಿದ ಆರೋಪದಡಿ ವಿಜಯಲಕ್ಷ್ಮೀ, ರಾಘವೇಂದ್ರ, ಇವರ ಮಕ್ಕಳಾದ ಆಕಾಶ್ ಹಾಗೂ ನಿರಂಜರನ್ ಸಹ ಅರೆಸ್ಟ್ ಆಗಿದ್ದಾರೆ. ಇನ್ನು ಶಾಸಕ ಪರಣ್ಣ ಮನೆಗೆ ಕವರ್ ಇಟ್ಟಿದ್ದ ಮಧು ಹಾಗೂ ನಾಗರಾಜ್ ಬಂಧನವಾಗಿದೆ. ಇದಾದ ಬಳಿಕ ಖೋಟಾನೋಟು ಕಿಂಗ್‌ಪಿನ್ ಅಮ್ಜದ್, ಅಬ್ದುಲ್ ರೆಹಮಾನ್ ಹಾಗೂ ಕಬೀರ್ ಬಂಧನವಾಗಿತ್ತು. ಈ ಪ್ರಕರಣದ ಕುರಿತ ಸಂಪೂರ್ಣ ದಾಖಲೆಗಳನ್ನು ಕೊಪ್ಪಳ ಪೊಲೀಸರು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿ ಮೋದಿ ಸ್ವಾಗತಿಸಿದ್ದ ಎರ್ರಿಸ್ವಾಮಿ ಅಂಧರ್..:

ಕೊಪ್ಪಳದಲ್ಲಿ ಜರುಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಪ್ರಧಾನಿ ಮೋದಿಯವರನ್ನು ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಂಧಿತನಾದ ಎರ್ರಿಸ್ವಾಮಿ ಬಿಲ್ಗಾರ ಸ್ವಾಗತಿಸಿದ್ದನ್ನು. ಕಾಣಬಹುದು, ಅತ್ಯಂತ ಬೀಗಿ ಭದ್ರತೆಯಲ್ಲಿಯೂ ಸಹ ಕ್ರಿಮಿನಲ್ ಹಿನ್ನೆಲೆಯುಳ್ಳ ಎರ್ರಿಸ್ವಾಮಿಯನ್ನು ಪ್ರಧಾನಿ ಸ್ವಾಗತಕ್ಕೆ ನಿಲ್ಲಿಸಿದ್ದೇ ವಿಚಿತ್ರ ಎನಿಸಿದೆ. ಇಲ್ಲಿ ಭದ್ರತಾ ಲೋಪ ಆಗಿರುವುದು ಕಂಡುಬಂದಿದ್ದನ್ನು ಗಮನಿಸಲಾಗಿದೆ. ಈ ಖೊಟಾ ನೋಟಿನ ಜಾಲದಲ್ಲಿ ದೊಡ್ಡ ಕುಳಗಳ ಕೈವಾಡ ಇರುವ ಶಂಕೆಯಿಂದಲೇ ಸಿಐಡಿ ತನಿಖೆಗೆ ವಹಿಸಿರುವ ಬಗ್ಗೆ ಮಾಹಿತಿ ದೊರೆತಿದೆ.

ಬಿಜೆಪಿಯ ಇಬ್ಬರು ಶಾಸಕರಲ್ಲಿ ಆತಂಕ ಸೃಷ್ಠಿಸಿದ ಪ್ರಕರಣ : ಈ ಪ್ರಕರಣದಲ್ಲಿ ಶಾಸಕರಿಗೆ ಆಪ್ತಿರಾದ ಎರ್ರಿಸ್ವಾಮಿ ಬಿಲ್ಗಾರ ಆರೋಪಿಯಾಗಿ ಬಂಧಿತನಾದ ಹಿನ್ನೆಲೆಯಲ್ಲಿ ಕನಕಗಿರಿ ಶಾಸಕ ಬಸವರಾಜ ದಡೆಸೂಗೂರು ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿಗೆ ಆತಂಕ, ಸಂಕಷ್ಟಕ್ಕೆ ಒಳಗಾಗಲು ಕಾರಣವಾಗುತ್ತಿದೆ. ಬೆದರಿಕೆ ಹಿನ್ನೆಲೆಯಲ್ಲಿ ಯೋಚಿಸದೆ ದೂರು ದಾಖಲಿಸಿದ್ದ ಶಾಸಕ ಪರಣ್ಣ ಇದೀಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಸಿಐಡಿ ಯಾವುದೇ ಒತ್ತಡಗಳಿಗೆ ಮಣಿಯದೆ ಸಮಗ್ರ,ಮತ್ತು ನಿಷ್ಪಕ್ಷಪಾತ ತನಿಖೆ ಮುಂದಾದಲ್ಲ್ಲಿ ಶಾಸಕ ದಡೆಸೂಗೂರರನ್ನು ತಗುಲಿಹಾಕಿಕೊಳ್ಳಲಿದೆ.

“ಖೊಟಾ ನೋಟು ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣವನ್ನು ಸಿಐಡಿಗೆ ವಹಿಸುವಂತೆ ನಾವೇ ಶಿಫಾರಸು ಮಾಡಿದ್ದೆವು. ಸಮಗ್ರ ತನಿಖೆ ನಡೆದರೆ ಸತ್ಯ ಹೊರ ಬರುತ್ತದೆ ಎಂದು ಇಲಾಖೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕರು ಈಗ ಸಿಐಡಿಗೆ ವರ್ಗಾಯಿಸಿದ್ದಾರೆ. ಸಂಬಂಧಿಸಿದ ತನಿಖಾಧಿಕಾರಿಗೆ ಎಲ್ಲಾ ದಾಖಲೆಗಳನ್ನು ನೀಡಿ, ಸಹಕರಿಸಲಾಗುವುದು”. —- ಡಾ. ಅನೂಪ್ ಶೆಟ್ಟಿ, ಎಸ್ಪಿ, ಕೊಪ್ಪಳ

Leave a Reply

Your email address will not be published.