ಭಾಗ್ಯನಗರ  ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ.ಪಂ. ಸದಸ್ಯರು


ಕೊಪ್ಪಳ: ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಹೊಂದಿಕೊಂಡಿರುವ ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಹಲವು ಸಮಸ್ಯೆಗಳಿದ್ದು, ಅಭಿವೃದ್ಧಿ ಸೇರಿದಂತೆ ಇತರೆ ಸಮಸ್ಯೆಗಳ ಪರಿಹಾರಕ್ಕೆ ಅಧ್ಯಕ್ಷೆ ಶೇಖಮ್ಮದೇವರಮನಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಸದಸ್ಯರು ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯ ವಿವಿಧ ಕಾಲೋನಿಗಳಿಗೆ ಕೂಡಲೇ ಫಾರಂ ನಂಬರು ಮೂರು ನೀಡುವುದು, ನಗರಾಭಿವೃದ್ಧಿ ಪ್ರಾಧಿಕಾರದಿಂದ ಮನೆ ಕಟ್ಟಲು ಕಟ್ಟಡ ಪರವಾನಿಗೆ, ಪೌರ ಕಾರ್ಮಿಕರ 5-6 ತಿಂಗಳ ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೋರಿದ್ದಾರೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಯಶೋಧ ಶಿವಶಂಕರಪ್ಪ ಮರಡಿ, ಸದಸ್ಯರಾದ ಹೊನ್ನೂರಸಾಬ ಮಹ್ಮದಸಾಬ ಭೈರಾಪೂರ, ವಿಜಯಕುಮಾರ ಲಿಂಗನಗೌಡ ಪಾಟೀಲ್, ಗಂಗಾಧರ ಗೇನಪ್ಪ ಕಬ್ಬೇರ, ಸುರೇಶ ದರಗದಕಟ್ಟಿ, ಭಾಗ್ಯನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಗಳಾ ಕುಲಕರ್ಣಿ, ಇಂಜನೀಯರು ಶಿಲ್ಪಾ ಉಪಸ್ಥಿತರಿದ್ದರು.

Leave a Reply

Your email address will not be published.