ಕಾಣೆಯಾದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು..!


ಕೊಪ್ಪಳ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಯವರಿಗೆ ಮಂತ್ರಿ ಆಗುವ ಭಾಗ್ಯವಂತೂ ಇಲ್ಲವೇ ಇಲ್ಲ, ರಾಣಿಬೆನ್ನೂರು ಶಾಸಕ ಆರ್.ಶಂಕರ್ ಅವರು ಕುಮಾರಸ್ವಾಮಿ ಸಂಪುಟದಲ್ಲಿ ಅರಣ್ಯ ಖಾತೆ ಮಂತ್ರಿಯಾಗಿದ್ದು ಇವರನ್ನು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ, ಆದರೆ ಇದುವರೆಗೂ ಕೊಪ್ಪಳದತ್ತ ಸಚಿವರು ಮುಖವ ಮಾಡಿಲ್ಲ.

ಕೊಪ್ಪಳ ಜಿಲ್ಲೆಯಾಗಿ ಎರಡು ಶತಮಾನಗಳು ಕಳೆದಿವೆ ಇದರ ಮಧ್ಯೆದಲ್ಲಿ ಜಿಲ್ಲೆಯವರು ಸಚಿವರು ಆಗಿದ್ದು ಕಮ್ಮಿ, ಹೊರ ಜಿಲ್ಲೆಯವರ ಉಸ್ತುವಾರಿಯ ಕಾರಬಾರೇ ಹೆಚ್ಚು, ಮಲ್ಲಿಕಾರ್ಜುನ ನಾಗಪ್ಪ, ಇಕ್ಬಾಲ್ ಅನ್ಸಾರಿ, ಶಿವರಾಜ ತಂಗಡಗಿ, ಬಸವರಾಜ ರಾಯರೆಡ್ಡಿ, ಹೊರತು ಪಡಿಸಿದರೆ, ಉಳಿದವರೆಲ್ಲರೂ ಅನ್ಯ ಜಿಲ್ಲೆಯವರೆ, ಈಗ ನೇಮಕವಾಗಿರು ಆರ್.ಶಂಕರ್ ಕೂಡ ಹಾವೇರಿ ಜಿಲ್ಲೆಯವರಾಗಿದ್ದರೆ.

ಹೊಸ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡುವುದರಲ್ಲಿ ಮೊದಲೆ ವಿಳಂಬವಾಗಿತ್ತು, ತಡವಾಗಿಯಾದರೂ ಕಳೆದ ಎರಡು ವಾರದಿಂದ ಎಲ್ಲಾ ಜಿಲ್ಲೆಗೂ ಉಸ್ತುವಾರಿ ಮಂತ್ರಿಗಳನ್ನು ನೇಮಿಸಿದ್ದು, ಕೊಪ್ಪಳಕ್ಕೆ ಅರಣ್ಯ ಸಚಿವ ಆರ್. ಶಂಕರ್ ಅವರು ಉಸ್ತುವಾರಿ ವಹಿಸಿಕೊಂಡಿದ್ದರು ಇದುವರೆಗೂ ಜಿಲ್ಲೆಯತ್ತ ಹೆಜ್ಜೆಹಾಕಿಲ್ಲ. ಇಂದಲ್ಲ ನಾಳೆಗೆ ಬರಲಿದ್ದಾರೆ ಮಂತ್ರಿಗಳನ್ನು ಅನ್ನುವದು ಬಿಟ್ಟು ಬೇರೆ ಯಾವ ಉತ್ತರವು ಬರುವದಿಲ್ಲ.

ಬೀದರ ಜಿಲ್ಲೆಯ ಬಂಡೇಪ್ಪ ಕಾಶಂಪೂರ್, ಬೆಂಗಳೂರಿನ ಜಮೀರ್ ಅಹ್ಮದ್ ಅವರು ಬಹುತೇಕ ಜಿಲ್ಲೆಯ ಮಂತ್ರಿ ಆಗುತ್ತಾರೆ ಎಂಬ ಸುದ್ದಿ ಇತ್ತು, ಆದರೆ ಅನಿರೀಕ್ಷತವಾಗಿ ಶಂಕರ್ ಅವರನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕೆಲ ಮುಖಂಡರು ಬೆಂಗಳೂರಿಗೆ ತೆರಳಿ ಸಚಿವರಿಗೆ ಶುಭಾಯಶ ಕೋರಿ ಬಂದಿದ್ದಾರೆ, ಶಂಕರ್ ಅವರು ಪಕ್ಷೇತರ ಅಭ್ಯರ್ಥಿಯಾಗಿದ್ದರೂ ಸಹ ಅವರು ಮಾಜಿ ಸಿಎಂ ಸಿದ್ದರಾಮಯ್ಯ ನವರ ಆಪ್ತರಾಗಿದ್ದು ಬಹುತೇಕ ಕಾಂಗ್ರೆಸ್ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಜಿಲ್ಲಾ ಮಂತ್ರಿಯನ್ನು ಪಕ್ಷ ಹಾಗೂ ಜಾತಿ ಆಧಾರದ ಮೇಲೆ ಭೇಟಿಯಾಗುತ್ತಿರುವ ಜಿಲ್ಲೆಯ ರಾಜಕೀಯ ನಾಯಕರಿಗೆ ಮಂತ್ರಿಗಳನ್ನು ಕರೆತರುವದಕ್ಕೆ ಆಗಿಲ್ಲ, ಆಗಷ್ಟ-೧೫, ಸ್ವಾತಂತ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಕೆಡಿಪಿ ಸಭೆಗಳು ಜರುಗಿಲ್ಲ, ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದಿವೆ, ಸುಮಾರು ಇಲಾಖೆಗಳಲ್ಲಿ ಅಧಿಕಾರಿಗಳ, ಸಿಬ್ಬಂದಿಗಳೇ ಇಲ್ಲ, ಇತ್ತ ಮುಂಗಾರು ಸಂಪೂರ್ಣ ವಿಫಲತೆಯಿಂದ ಬರದಛಾಯೆ ಮೂಡಿದ್ದು ಜನ ಸಂಕಷ್ಟ ಎದುರಿಸುತ್ತಿದ್ದು ಮಂತ್ರಿಗಳು ಹೇಗೆ ನಿಭಾಯಿಸುವರು ಕಾದು ನೋಡಬೇಕಷ್ಟೇ.

Leave a Reply

Your email address will not be published.