ಸಿಎಂ ಕುಮಾರಸ್ವಾಮಿಗೆ ಈಗ ಮಾಧ್ಯಮ ಅಲರ್ಜಿ!!


ಬೆಂಗಳೂರು: ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಇದೀಗ ಮಾಧ್ಯಮಗಳ ಬಗ್ಗೆ ಅಲರ್ಜಿ ಶುರುವಾಗಿದೆ.

ವಿಧಾನಸೌಧದಿಂದಲೂ ಮಾಧ್ಯಮಗಳನ್ನು ದೂರ  ಇರಿಸಲು ಕೆಲವು ದಿನಗಳ ಹಿಂದೆ ಪ್ರಯತ್ನಿಸಿ ಸುದ್ದಿಯಾಗಿದ್ದ ಕುಮಾರಸ್ವಾಮಿ ತಾವೂ ಮಾಧ್ಯಮಗಳಿಂದ ದೂರ ಇರಲು ಬಯಸಿರುವುದಾಗಿ ನಿನ್ನೆಯಷ್ಟೇ ಹೇಳಿಕೆ ನೀಡಿದ್ದರು.

ಇಂದು ಜೆಪಿ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದ ಸಂದರ್ಭದಲ್ಲಿ ಹೇಳಿಕೆ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಮುಂದೆ ಬರುತ್ತಿದ್ದಂತೆಯೇ ಸಿಎಂ ರಿಂದ ಮೌಖಿಕ ಸೂಚನೆ ಪಡೆದುಕೊಂಡಿದ್ದ ಪೊಲೀಸರು ಅಡ್ಡ ಬಂದರು.

ಲೋಗೋಗಳನ್ನು ಬೇಕಿದ್ದರೆ ನಾವೇ ಹಿಡಿದುಕೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದು ಮಾಧ್ಯಮ ಪ್ರತಿನಿಧಿಗಳನ್ನು ಕೆರಳಿಸಿತು. ಕೊನೆಗೂ ಏನನ್ನೂ ಮಾತನಾಡದೇ ಸಿಎಂ ಹೊರಟು ಹೋದರು.

Leave a Reply

Your email address will not be published.