ಗ್ರಾಪಂ, ತಾಪಂ ಅಧಿಕಾರಿಗಳು ವಸತಿ ಕಲ್ಪಿಸಲು ಹಿಂದೇಟು: ಎಸಿಗೆ ಮನವಿ ಸಲ್ಲಿಸಿದ ಬ್ಯಾಲ್ಯಾ ಗ್ರಾಮಸ್ಥರು


ಮಧುಗಿರಿ: ಸ್ಥಳೀಯ ಗ್ರಾಪಂ ತಾಪಂ ಸೇರಿದಂತೆ ತಾಲೂಕು ಆಡಳಿತದಿಂದ ನಿವೇಶನ ರಹಿತರನ್ನು ಗುರುತಿಸಿ ವಸತಿ ಸೌಲಭ್ಯ ಕಲ್ಪಿಸಿ ಕೊಡದೆ ಮಾನವ ಜೀವಿಸುವ ಹಕ್ಕನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯರವರಿಗೆ ಹಾಗೂ ತಾಪಂ ಇಓ ಮೋಹನ್ ಕುಮಾರ್ ರವರಿಗೆ ಬ್ಯಾಲ್ಯ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.

ತಾಲೂಕಿನ ಪುರವರ ಹೋಬಳಿಯ ಬ್ಯಾಲ್ಯ ಗ್ರಾಮದಲ್ಲಿ ತೀರಾ ಹಿಂದುಳಿದ ತಳ ಸಮೂದಾಯಗಳ ನಾಗರೀಕರು ಹಲವು ಬಾರಿ ನಿವೇಶನ ನೀಡುವಂತೆ ಗ್ರಾಪಂಗೆ ದಾಖಲೆಗಳ ಸಮೇತ ಮನವಿ ನೀಡುತ್ತಾ ಬಂದಿದ್ದರೂ ಸಹ ಅವರ ಮನವಿಗಳಿಗೆ ಇದೂವರೆವಿಗೂ ಸ್ಪಂದಿಸಿಸಿಲ್ಲ. ಈ ಬಗ್ಗೆ ಗ್ರಾಪಂ ನವರ ಬಳಿ ವಿಚಾರಿಸಿದರೆ ಜಾಗ ಖಾಲಿ ಇಲ್ಲವೆಂದು ಹೇಳಿ ಅರ್ಜಿಗಳನ್ನು ಕಸದ ಬುಟ್ಟಿಯಲ್ಲಿ ಹಾಕಿ ಅಧಿಕಾರಿಗಳು ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಭೂಮಿ ಮತ್ತು ವಸತಿಯ ತಾಲೂಕು ಕಾರ್ಯದರ್ಶಿ ಹಂದ್ರಾಳು ನಾಗಭೂಷಣ್ ಮಾತನಾಡಿ,  ಗ್ರಾಮಸ್ಥರು ಸಮಸ್ಯೆಯ ಬಗ್ಗೆ ತಿಳಿಸಿದ್ದರು ಜತೆಗೆ ಒಂದೇ ಮನೆಯಲ್ಲಿ ಹಲವು ಕುಟುಂಬಗಳು ಹಾಗೂ ಬಾಡಿಗೆ ಮನೆಯಲ್ಲಿ ಈ ಜನರು ವಾಸವಿದ್ದಾರೆ. ಬ್ಯಾಲ್ಯ ಗ್ರಾಪಂ ವ್ಯಾಫ್ತಿಯ ಸ.ನಂ.97ರಲ್ಲಿ ನಾನ ಉದ್ದೇಶಗಳಿಗೆ ನಿವೇಶನ ನೀಡಲಾಗಿದೆ. ಅದರಲ್ಲಿ ಇನ್ನೂ ಜಾಗವಿರುವುದರಿಂದ ಬಡವರಿಗೆ ನಿವೇಶನ ನೀಡಿ ಆರ್ಹರಿಗೆ ಸರಕಾರಿ ಸೌಲಭ್ಯಗಳನ್ನು ದೊರಕಿಸಿಕೊಡ ಬೇಕಾಗಿದೆ ಈ ಹಿಂದೆ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವ್ಯವಸ್ಥಾಪಕ ನಿರ್ದೇಶಕರು ರಾಜೀವ್ ಗಾಂಧಿ ಗ್ರಾಮೀಣಾ ವಸತಿ ನಿಗಮ ನಿಯಮಿತ ಈ ಸಮಸ್ಯೆಯ ದೂರು ನೀಡಲಾಗಿತ್ತು. ಆದರೆ ತಾಪಂ ಇಓ ಆಗಲಿ ಜಿಲ್ಲಾಧಿಕಾರಿಗಳಾಗಲಿ ಸಮಸ್ಯೆಯನ್ನು ಪರಿಹರಿಸಿಲ್ಲ. ಕೂಡಲೇ ಅಧಿಕಾರಗಳು ಎಚ್ಚೆತ್ತು ಸಮಸ್ಯೆ ಪರಿಹರಿಸದಿದ್ದಲ್ಲಿ ಮುಂದೆ ಉಗ್ರ ಹೋರಾಟ ಹಾದಿ ಹಿಡಿಯ ಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಶ್ರೀನಿವಾಸ್, ಆನಂದ್, ವಾಜೀದ್, ಮಂಜಮ್ಮ, ಸರೋಜಮ್ಮ, ಹನುಮಕ್ಕ, ಲಲಿತಮ್ಮ, ಉಮಾದೇವಿ, ವೆಂಕಟಲಕ್ಷ್ಮೀ, ನಾಗಮ್ಮ, ಶಾನು, ಮೆಹಬೂಬ, ಜಬಿನ್ ತಾಜ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.