ಗೋಕಾಕ-ಚಿಕ್ಕೋಡಿ ಜಿಲ್ಲಾ ರಚನೆಗೆ ಸಹಮತವಿದೆ: ಸಚಿವ ರಮೇಶ ಜಾರಕಿಹೊಳಿ


ಬೆಳಗಾವಿ:  ಸ್ಥಳೀಯ ಸಂಸ್ಥೆಗಳ ಚುನಾವಣೆ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ ಎಂದು ಪೌರಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ  ಕಾರಣಕ್ಕೂ ಕೆ-ಶಿಪ್ ಕಚೇರಿಯನ್ನು ಸ್ಥಳಾಂತರಿಸಲು ಬಿಡುವುದಿಲ್ಲ ಅಂತಾ ಮೊನ್ನೆಯಷ್ಟೇ ಶಾಸಕ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು ಒಗ್ಗಟ್ಟಿನಿಂದ  ಹೋರಾಟ ನಡೆಸಿ ಕಚೇರಿಯನ್ನು ಇಲ್ಲಿಯೇ ಉಳಿಸಿಕೊಳ್ಳುತ್ತೇವೆ ಎಂದರು.

ಬೆಳಗಾವಿ ಎರಡನೇ ರಾಜಧಾನಿಗೆ ನಮ್ಮ ಸಹಮತವಿದೆ. ಇದರ ಬಗ್ಗೆ ಸಿಎಂ ನೇತೃತ್ವದಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ ಅವರು, ಬೆಳಗಾವಿ ಇಬ್ಬಾಗವಾದರೇ ಗೋಕಾಕ ,ಮತ್ತು  ಚಿಕ್ಕೋಡಿ ಜಿಲ್ಲೆ ರಚನೆಗೆ ನಮ್ಮ ಸಹಮತವಿದೆ ಎಂದು ಪುನರುಚ್ಚರಿಸಿದರು.

ರೈತರ ಹೋರಾಟಕ್ಕೆ ಜಯ ಸಂದಿದೆ:

ಮಹದಾಯಿ ನೀರಿಗಾಗಿ 4 ದಶಕಗಳ ಕಾಲ ಹೋರಾಟ ನಡೆಸಿದ ನರಗುಂದ, ಹುಬ್ಬಳ್ಳಿ ಭಾಗದ  ರೈತರಿಗೆ, ಜನರಿಗೆ ಜಯ ಸಿಕ್ಕಿದೆ. ಇನ್ನು ಸ್ವಲ್ಪ ನೀರು ಜಾಸ್ತಿ ಸಿಗಬೇಕಿತ್ತು. ಈ ಬಗ್ಗೆ ಸರ್ವ ಪಕ್ಷದ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಲೋಕಸಭೆಗೆ ಯಾರೇ ಸ್ಪರ್ಧಿಸಿದರು ಸ್ವಾಗತ:

ಇನ್ನು  ಲೋಕಸಭೆ ಚುನಾವಣೆಗೆ ಶಾಸಕರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಕೇಳಿ ಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು,  ಲೋಕಸಭೆ ಚುನಾವಣೆಗೆ ಯಾರೇ ಸ್ಪರ್ಧಿಸಿದರು ನಮ್ಮ ಸ್ವಾಗತವಿದೆ. ಲಖನ ಜಾರಕಿಹೊಳಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ  ಗುಟ್ಟು ಬಿಟ್ಟುಕೊಡದ ಸಚಿವರು  ಲಖನ ಸ್ಪರ್ಧೆ ನಮ್ಮ ಕುಟುಂಬ ವಿಷಯ ಅದರ ಬಗ್ಗೆ ಇಲ್ಲಿ ಚರ್ಚಿಸುವುದಿಲ್ಲ ಅಂತಾ ಹೇಳಿದರು.

ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಜಿಯಾವುಲ್ಲಾ, ಪೊಲೀಸ್ ಕಮಿಷನರ್  ಡಿ.ಸಿ ರಾಜಪ್ಪ, ಎಸ್ಪಿ ಸುಧೀರಕುಮಾರ್ ರೆಡ್ಡಿ ಇತರರು ಇದ್ದರು.

Leave a Reply

Your email address will not be published.