ಶಹಾಪುರ ಕಸಾಪದಿಂದ ದಿ. 12 ರಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರಗೆ ಸನ್ಮಾನ


ಶಹಾಪುರ: ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶಹಾಪುರ ನೂತನ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸನ್ಮಾನ ಸಮಾರಂಭವನ್ನು ದಿ. 12 ರಂದು ಬೆಳಿಗ್ಗೆ 10:30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೆಗುಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಹಾಪುರದ ಹೊಸ ಬಸ್ ನಿಲ್ದಾಣದ ಹತ್ತಿರವಿರುವ ದೇಶಮುಖ್ ಬಡಾವಣೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಸಾಹಿತ್ಯ ಪರಿಷತ್ತಿನ ಸದಸ್ಯರು ಕನ್ನಡ ಅಭಿಮಾನಿಗಳು ಕನ್ನಡಪರ ಹೋರಾಟಗಾರರು ಹಿರಿಯ, ಕಿರಿಯ,ಸಾಹಿತಿಗಳು ಎಲ್ಲರೂ ಭಾಗವಹಿಸಬೇಕೆಂದು ತಿಳಿಸಿದ್ದಾರೆ.

ಈ ಸಮಾರಂಭವನ್ನು ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ರಾಯಚೂರಿನ ಸಂಸದರಾದ ಸನ್ಮಾನ ಶ್ರೀ ಬಿ,ವಿ, ನಾಯಕ. ಶ್ರೀ ಸಿದ್ದಲಿಂಗಣ್ಣ ಆನೆಗುಂದಿ, ಅಧ್ಯಕ್ಷತೆ ವಹಿಸುವವರು ಅತಿಥಿಗಳಾಗಿ ಚಂದ್ರಶೇಖರ ಆರಬೋಳ, ಹಿರಿಯ ಸಾಹಿತಿಗಳಾದ ಶ್ರೀ ಚಂದ್ರಕಾಂತ ಕರದಳ್ಳಿ, ಸಿದ್ದರಾಮ ಹೊನಕಲ್, ದೊಡ್ಡಬಸಪ್ಪ ಬಳೂರಗಿ, ಗುರುಬಸಯ್ಯ ಗದ್ದುಗೆ, ಬಸವರಾಜ್ ಹಿರೇಮಠ ಭಾಗವಹಿಸುವವರು.

ಸಗರ ವಲಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗಣ್ಣ ಪಡಶೆಟ್ಟಿ,ಶಿರವಾಳ ವಲಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲಣ್ಣ ಹೊಸಮನಿ, ಗೋಗಿ ವಲಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲಣಗೌಡ ಗೋಗಿ,ದೋರನಹಳ್ಳಿ ವಲಯ ಕಲೆ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾಂತಪ್ಪ ಜಾಗಟೆ, ಹನುಮಂತಿ ಗುತ್ತೇದಾರ, ಸಾಯಬಣ್ಣ ಮಡಿವಾಳಕರ’ ಕವಿತಾ ಬಡಿಗೇರ, ಪಾಲ್ಗೊಳ್ಳುವರು ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಬಸವರಾಜ ಸಿಣ್ಣೂರು ತಿಳಿಸಿದ್ದಾರೆ.

Leave a Reply

Your email address will not be published.