ಮುದ್ದೇಬಿಹಾಳ: ಸಮ್ಮೇಳನ ಯಶಸ್ವಿ, ಗಣ್ಯರಿಗೆ ಹೃದಯಪೂರ್ವಕ ಸನ್ಮಾನ

ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದಲ್ಲಿ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪತ್ರಕರ್ತರು,ಸಾಹಿತಿಗಳು,ಕಲಾವಿದರು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯ್ದ ಗಣ್ಯರನ್ನು ಸನ್ಮಾನಿಸಲಾಯಿತು.

ಪತ್ರಕರ್ತರು,ಸಾಹಿತಿಗಳು,ಸಾಧಕರಿಗೆ ಅಭಿನಂದನೆ

ಮುದ್ದೇಬಿಹಾಳ : ತಾಲೂಕಿನ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಸಾಧಕರನ್ನು ಸಮ್ಮೇಳನದ ಸಂಘಟಕರು ಸನ್ಮಾನಿಸಿ ಅಭಿನಂದಿಸಿದರು.

ಕುಸ್ತಿಪಟು ರವಿಚಂದ್ರ ಹಡಲಗೇರಿ,ಪ್ರಸೂತಿ ವಿಭಾಗದಲ್ಲಿ ಮಹಾದೇವಿ ಕಾಮನಕೇರಿ,ಕಲಾವಿದ ಎಸ್.ಎಮ್.ನಾಯ್ಕೋಡಿ ,ಮಲ್ಲಿಕಾರ್ಜುನ ಶೆಟ್ಟರ,ಚಂದ್ರಶೇಖರ ಪತ್ತಾರ,ಕುಸ್ತಿ ವಿಭಾಗದಿಂದ ಮಹೇಶ ಪಾಚಂಗೆ,ಕರಾಟೆಯಲ್ಲಿ ಅಪೂರ್ವಾ ಡಮನಾಳ,ಸಮಾಜ ಸೇವೆಯಲ್ಲಿ ಶ್ರೀನಿವಾಸ ಇಲ್ಲೂರ,ಮಲ್ಲಣ್ಣ ಹಡಪದ,ಆಧ್ಯಾತ್ಮ ಕ್ಷೇತ್ರದಲ್ಲಿ ಪರಶುರಾಮ ಚೌಡಕೇರ,ಮಾಧ್ಯಮ ಕ್ಷೇತ್ರದಲ್ಲಿ ಬಸವರಾಜ ಈ. ಕುಂಬಾರ,ಡಿ.ಬಿ.ವಡವಡಗಿ,ಹಣಮಂತ ಬೆಳಗಲ್ಲ,ಸಂಗೀತ ಕ್ಷೇತ್ರದಲ್ಲಿ ವೀರೇಶ ನವಲಿ,ಬಸಯ್ಯ ಮಠಪತಿ,ದೇಶಸೇವೆಯಲ್ಲಿ ಎಸ್.ಆರ್.ಕುಲಕರ್ಣಿ,ಎನ್.ಎ.ಬಿರಾಜ್ದಾರ,ಸಮಾಜ ಸೇವೆಯಲ್ಲಿ ಮಹಾವೀರ ಸಗರಿ,ಕಲೆ ವಿಭಾಗದಲ್ಲಿ ಸಿದ್ಧರಾಜ ಹೊಳಿ,ಭಜನಾ ವಿಭಾಗದಲ್ಲಿ ಗುರುಬಸಪ್ಪ ಚಲವಾದಿ,ಗೋವಾ ವಿಮೋಚನಾ ಹೋರಾಟಗಾರ ಬಿ.ಎಚ್.ಮಾಗಿ,ನೃತ್ಯ ವಿಭಾಗದಲ್ಲಿ ವಿಷ್ಣು ಲಮಾಣಿ,ಪರಿಸರ ವಿಭಾಗದಲ್ಲಿ ಅದೀಬಾ ಗುಲಾಂ ದಫೇದಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಾವಿದರಾದ ಶ್ರೀಶೈಲ ಹೂಗಾರ,ಗೋಪಾಲ ಹೂಗಾರ,ಸಿದ್ದನಗೌಡ ಬಿಜ್ಜೂರ,ಗಿರಿಜಾ ಕಡಿ,ಪತ್ರಕರ್ತರಾದ ಶಂಕರ ಹೆಬ್ಬಾಳ,ಪುಂಡಲೀಕ ಮುರಾಳ,ಗುಲಾಂ ದಫೇದಾರ,ಮುತ್ತು ಬೀರಗೊಂಡ,ಬಸವರಾಜ ಹುಲಗಣ್ಣಿ,ಚೇತನ್ ಕೆಂಧೂಳಿ,ರಾಜಶೇಖರ ಸಜ್ಜನ,ಬಸವರಾಜ ನಂದಿಹಾಳ,ಸಿದ್ದು ಚಲವಾದಿ,ಲಾಡ್ಲೇಮಶ್ಯಾಕ ನದಾಫ,ಎಸ್.ಆರ್.ಸುಲ್ಫಿ,ಎಂ.ಜಿ.ಕಿತ್ತೂರ,ಜೆ.ಡಿ.ಮುಲ್ಲಾ,ವಿಶೇಷ ಸಾಧನೆ ತೋರಿದ ಸಿದ್ದನಗೌಡ್ರು ಬಿರಾದಾರ,ವಿಜ್ಞಾನಿ ಚಂದ್ರಶೇಖರ ಬಿರಾದಾರ,ಮನೋಹರ ಕೋರಿ ಮತ್ತಿತರರನ್ನು ಸನ್ಮಾನಿಸಲಾಯಿತು.

ಕವಿಗೋಷ್ಠಿ:01
ಸಾಹಿತ್ಯ ಸಂಗಮ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ತಾಳಿಕೋಟಿ ಸಪಪೂ ಕಾಲೇಜಿನ ಉಪನ್ಯಾಸಕ ಪ್ರೊ.ಎಂ.ಎಚ್.ಹಾಲ್ಯಾಳ ಅವರು ಮುದ್ದೇಬಿಹಾಳ ತಾಲೂಕಾ ‘ಸಾಹಿತ್ಯ ದರ್ಶನ’ ವಿಷಯವಾಗಿ ಮಾತನಾಡಿ, ಹಲವು ಹತ್ತು ಜನ ಸಾಹಿತಿಗಳು ನಮ್ಮ ನೆಲದ ಹೆಸರನ್ನು ರಾಜ್ಯ,ರಾಷ್ಟ್ರಮಟ್ಟಕ್ಕೆ ಬೆಳೆಸಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಸಂಶೋಧನೆ,ಸಾಹಿತ್ಯ ಕೃತಿಗಳ ಅಧ್ಯಯನದಿಂದ ಈ ನೆಲದ ಸಿರಿವಂತಿಕೆ ಹೆಚ್ಚಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದೊಡ್ಡಣ್ಣ ಭಜಂತ್ರಿ,ಗಣ್ಯರಾದ ಮಲ್ಲನಗೌಡ ಬಿರಾದಾರ,ನಿವೃತ್ತ ಶಿಕ್ಷಕ ಸಂಗಣ್ಣ ಕೊಣ್ಣೂರ ಇದ್ದರು.ಜಾನಪದ ಸಾಹಿತ್ಯದಲ್ಲಿ ಶರಣ ಧರ್ಮ ವಿಷಯವಾಗಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಂ.ಬೆಳಗಲ್ ಅವರು,ಗ್ರಾಮೀಣ ಭಾಗದಲ್ಲಿ ನಿತ್ಯ ನೂತನವಾಗಿರುವ ಜಾನಪದ ಸಾಹಿತ್ಯದಿಂದ ಸಾಹಿತ್ಯದ ಸೊಗಡು ಹೆಚ್ಚಿದೆ ಎಂದರು.

ಕವಿಗೋಷ್ಠಿ:02
ಮುದ್ದೇಬಿಹಾಳ : ತಾಲೂಕಾ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ನಡೆಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಚುಟುಕು ಸಾಹಿತಿ ಕೆ.ಜಿ.ಭಣದ್ರಣ್ಣವರ ಮಾತನಾಡಿ ,ಇಂದಿನ ಕವಿಗಳಿಗೆ ಸಾಹಿತ್ಯದ ಅರಿವು ಹೆಚ್ಚಬೇಕಿದೆ.ಕನ್ನಡ ಸಾಹಿತ್ಯದಲ್ಲಿ ಹೆಸರು ಮಾಡಿರುವ ಲೇಖಕರು,ಸಾಹಿತಿಗಳ ಜೀವನ ಚರಿತ್ರೆ ಹಾಗೂ ಅವರ ಕೃತಿಗಳನ್ನು ಓದಿ ಜ್ಞಾನ ಸಂಪಾದಿಸಬೇಕು ಎಂದರು.
ಡಿ.ಬಿ.ವಡವಡಗಿ,ಕಾಶೀನಾಥ ಹಿರೇಮಠ,ಬಿ.ಆರ್.ಬನಸೋಡೆ ಉದ್ಘಾಟಿಸಿದರು.ಎಸ್.ಬಿ.ಬಂಗಾರಿ,ಚಂದ್ರಶೇಖರ ಇಟಗಿ,ಎಂ.ಕೆ.ಗುಡಿಮನಿ,ಬಸವರಾಜ ಕಡಕಲ್ ಇದ್ದರು.
ಗೋಷ್ಠಿಯಲ್ಲಿ ಕವಿಗಳಾದ ಸಿದ್ದಣ್ಣ ಹಡಲಗೇರಿ,ಮಹೇಶ ಹಡಪದ,ಮಹಾಂತೇಶ ಹಾವರಗಿ,ಅಜೀತ ಕಾಶಿನಕುಂಟಿ,ಗಂಗಾಧರ ಜೂಲಗುಡ್ಡ,ಸುಮಲತಾ ಗಡಿಯಪ್ಪನವರ,ಡಿ.ಬಿ.ಮೇಟಿ,ಸಂಗಣ್ಣ ಕೋನಣ್ಣವರ,ಚೈತ್ರಾ ಬಂಗಾರಗುಂಡ,ಸಿದ್ದು ಅಹಿರಸಂಗ,ಅಮರೇಶ ತೊಂಡಿಹಾಳ,ಎಸ್.ಎಮ್.ನೆರಬೆಂಚಿ,ಎಂ.ಎಚ್.ಬಡಿಗೇರ,ಮಹಾದೇವಿ ಕಿಣಗಿ,ಎಸ್.ಆರ್.ಕುರಿ,ಬಸಮ್ಮ ರೂಢಗಿ,ಶಂಕರಲಿಂಗ ಹೂಗಾರ,ಚೆನ್ನಮ್ಮ ಕಂಗಳ,ನೀಲಮ್ಮ ಹಿರೇಮಠ ಕವನ ವಾಚಿಸಿದರು.

Leave a Reply

Your email address will not be published.