ಹೆಚ್ಚುವರಿ ಬಸ್ ಗಾಗಿ ವಿದ್ಯಾರ್ಥಿಗಳ ಆಗ್ರಹ: ವ್ಯವಸ್ಥಾಪಕರಿಗೆ ಮನವಿ


ಮುದ್ದೇಬಿಹಾಳ: ತಾಲೂಕಿನ ಆಲೂರ-ನೆರಬೆಂಚಿ ಗ್ರಾಮದ ಮೂಲಕ ಹೆಚ್ಚುವರಿ ಬಸ್ ಓಡಿಸಬೇಕೆಂದು ಆಗ್ರಹಿಸಿ ಬುಧವಾರ ವಿದ್ಯಾರ್ಥಿಗಳು ಘಟಕ ವ್ಯವಸ್ಥಾಪಕರಿಗೆ ಮನವಿ  ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಶೇಖಪ್ಪ ಆಲೂರ, ಮಲ್ಲಿಕಾರ್ಜುನ ಬಿರಾದಾರ, ಪ್ರತಿದಿನ ಆಲೂರ ಗ್ರಾಮದಿಂದ ಮುಂಜಾನೆ 8 ಗಂಟೆಗೆ ಬಿಡುವ ಬಸ್ ಆಲೂರ,ಕೇಸಾಪೂರ ಗ್ರಾಮದಲ್ಲಿಯೇ ವಿದ್ಯಾರ್ಥಿಗಳನ್ನು ತುಂಬಿಕೊಂಡು ನೆರಬೆಂಚಿಗೆ ಬರುವಷ್ಟರಲ್ಲಿಯೇ ಬಸ್‍ನಲ್ಲಿ ಕಾಲಿಡಲು ಜಾಗೆ ಇರುವುದಿಲ್ಲ.ಅಲ್ಲದೇ ಟಾಪ್‍ನಲ್ಲೂ ಪ್ರಯಾಣ ಮಾಡಿರುತ್ತಾರೆ. ಇದರಿಂದ ನಾವು ಚಾಲಕರು,ನಿರ್ವಾಹಕರ ಜೊತೆಗೆ ನಿತ್ಯವೂ ವಾದಕ್ಕಿಳಿಯುತ್ತಿದ್ದೇವೆ.ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲದ ಕಾರಣ ವಿದ್ಯಾಭ್ಯಾಸಕ್ಕೂ ಅಡಚಣೆಯಾಗಿದ್ದು ನೆರಬೆಂಚಿಗೆ ಅದೇ ಸಮಯಕ್ಕೆ ಬಸ್ ಬಿಡಬೇಕು ಎಂದು ಹೇಳಿದರು.

ಒಂದು ವೇಳೆ ವಾರದಲ್ಲಿ ಬಸ್ ಬಿಡದಿದ್ದರೆ ಎಲ್ಲ ವಿದ್ಯಾರ್ಥಿಗಳು ಘಟಕದ ಮುಂದೆ ಸತ್ಯಾಗ್ರಹ ನಡೆಸಲಾಗುವುದು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳಾದ ವೈ.ಎಂ.ಯರಗಲ್,ಎಸ್.ಎಸ್.ಆಲೂರ, ಎಂ.ಎಸ್.ಹಿರೇಗೌಡರ, ಎ.ಎಸ್.ಅಂಗಡಿ, ಎಂ.ಎಸ್.ಕುಂಬಾರ, ಡಿ.ಎಸ್.ಭೋವಿ, ಎ.ಆರ್.ತಾಳಿಕೋಟಿ, ಎಚ್.ಬಿ.ಮಾದರ, ಎಂ.ಬಿ.ಮಾದರ, ಗುರುಪಾದ ಸುಂಬಡ, ಮಲ್ಲಿಕಾರ್ಜುನ ಹುಣಸಗಿ, ಮಹೇಶ ಕುಂಬಾರ ಇನ್ನಿತರರು ಇದ್ದರು.

Leave a Reply

Your email address will not be published.