ಮುದ್ದೇಬಿಹಾಳ- ಇಣಚಗಲ್‍ಗೆ ಬಸ್ ಸೇವೆ ಒದಗಿಸಲು ವಿದ್ಯಾರ್ಥಿಗಳ ಒತ್ತಾಯ


ಮುದ್ದೇಬಿಹಾಳ: ತಾಲೂಕಿನ ಇಣಚಗಲ್-ಜಕ್ಕೇರಾಳ ಗ್ರಾಮದ ಮಾರ್ಗವಾಗಿ ಬೆಳಗ್ಗೆ ಮುದ್ದೇಬಿಹಾಳ ನಗರಕ್ಕೆ ಆಗಮಿಸಲು ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು,ಗ್ರಾಮಸ್ಥರು ಘಟಕ ವ್ಯವಸ್ಥಾಪಕರಿಗೆ ಮಂಗಳವಾರ ಮನವಿ  ಸಲ್ಲಿಸಿದರು.

ಪಟ್ಟಣದ ಸಾರಿಗೆ ಘಟಕದಲ್ಲಿ ಪ್ರಭಾರಿ ಸಾರಿಗೆ ಘಟಕ ವ್ಯವಸ್ಥಾಪಕ ಎಸ್.ಎಂ.ಶೀಲವಂತ ಅವರಿಗೆ ಮನವಿ ಪತ್ರ ಸಲ್ಲಿಸಿ ಗ್ರಾಮದ ಮುಖಂಡ ಬಿ.ಆರ್.ದೇಶಪಾಂಡೆ ಮಾತನಾಡಿ, ಬಸ್ ಸೌಲಭ್ಯ ಇಲ್ಲದಿರುವುದರಿಂದ ರೈತರಿಗೆ,ಗ್ರಾಮಸ್ಥರಿಗೆ ನಿತ್ಯವೂ ಮುದ್ದೇಬಿಹಾಳಕ್ಕೆ ತರಕಾರಿ,ಹಾಲು, ಹಾಗೂ ಇನ್ನೀತರ ರೈತ ಉತ್ಪನ್ನಗಳನ್ನು ವ್ಯಾಪಾರಕ್ಕಾಗಿ ತರಲು ಆಗುತ್ತಿಲ್ಲ. ವಿದ್ಯಾರ್ಥಿಗಳು ನಿತ್ಯವೂ 7 ಗಂಟೆಗೆ ಕಾಲೇಜುಗಳಿಗೆ ಹೋಗಲಾಗದೇ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗಿದೆ. ಇದರಿಂದ ಶಿಕ್ಷಣದಲ್ಲಿ ಹಿಂದೆ ಬೀಳುವಂತಾಗಿದೆ ಎಂದು ಆರೋಪಿಸಿದರು.

ನಿತ್ಯವೂ ನೂರಾರು ಜನ ಮುದ್ದೇಬಿಹಾಳ ಪಟ್ಟಣಕ್ಕೆ ವಿವಿಧ ಕೆಲಸಕ್ಕೆ ಹೋಗುತ್ತಾರೆ ಹೀಗಾಗಿ ಇಣಚಗಲ್-ಜಕ್ಕೇರಾಳ ಮಾರ್ಗವಾಗಿ ಬಸ್ ಓಡಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಅಧಿಕಾರಿ ಎಸ್.ಎಮ್.ಶೀಲವಂತ ಪರಿಶೀಲನೆ ನಡೆಸಿ ಕ್ರಮ ಜರುಗಿಸುವುದಾಗಿ ಹೇಳಿದರು.

ಗ್ರಾಮಸ್ಥರಾದ ಬಿ.ಆರ್.ದೇಶಪಾಂಡೆ,ಭೀಮಣ್ಣ ವಡ್ಡರ,ಹಣಮಂತ ಚಲವಾದಿ,ಜೆ.ಬಿ.ಮಕಾಳಿ,ನಿಂಗಪ್ಪ ಜಕ್ಕೇರಾಳ,ಕೃಷ್ಣಾ ಸೋಮನಾಳ,ಮುತ್ತು ಕವಡಿಮಟ್ಟಿ,ಲಕ್ಷ್ಮಣ ಗೋನಾಳ,ಕಲ್ಲಪ್ಪ ಹೊನ್ನಳ್ಳಿ,ಮರಗಪ್ಪ ಟಕ್ಕಳಕಿ,ಆನಂದ ದೊಡಮನಿ,ಮುತ್ತು ಕಟ್ಟಿಮನಿ,ಸಂತೋಷ ಹೊಸಮನಿ ಇದ್ದರು.

Leave a Reply

Your email address will not be published.