ಬೈಲಹೊಂಗಲ: ಪ್ರೀತಿಸಿ ಮದುವೆಯಾದ ಪ್ರೀಯತಮೆಯನ್ನೇ ಕೊಂದ ಭೂಪ


ಬೈಲಹೊಂಗಲ: ಪ್ರೀತಿಸಿ ಮದುವೆಯಾದ ಪ್ರೀಯತಮೆಯನ್ನೇ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ  ನಡೆದಿದೆ.

ಸುಮಾ(21) ಹತ್ಯೆಯಾದ ದುರ್ದೈವಿ.  ಪತಿ ಯುವರಾಜ್ ಹಾಗೂ ಮಾವ, ಅತ್ತೆ, ಮೈದುನ‌ರು ಸೇರಿ ಹಲ್ಲೆ ಮಾಡಿ ಕತ್ತು ಹಿಸುಕಿ ಹತ್ಯೆ  ಮಾಡಿದ್ದಾರೆಂದು ಸುಮಾ ಕುಟುಂಬದವರು ಆರೋಪಿಸಿದ್ದಾರೆ.

ಕಳೆದ 10 ತಿಂಗಳು ಹಿಂದಷ್ಟೇ ಸುಮಾ ಹಾಗೂ ಯುವರಾಜ್  ಮನೆಯವರ ವಿರೋಧದ ನಡುವೆಯೂ ರಜಿಸ್ಟರ್ ಮ್ಯಾರೆಜ್ ಆಗಿದ್ದರು. ಅದೇ ಗ್ರಾಮದಲ್ಲಿ ವಾಸವಿದ್ದರು. ಗ್ರಾಮದ ಹಿರಿಯರ ಸಂಧಾನದ ನಂತರ ಮಗ ಹಾಗೂ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದ ಅತ್ತೆ‌ ಮಾವ ನಂತರ ಸುಮಾಳ ಹತ್ಯೆ ಮಾಡಿದ್ದಾರೆ ಎಂದು ಕುಟುಂಬದವರ ಆರೋಪವಾಗಿದೆ.

ಹತ್ಯೆ ಮಾಡಿದ ನಂತರ ಪತಿ ಯುವರಾಜ್ ಅಬ್ಬಾರ್, ಮಾವ ಬಸಪ್ಪ, ಅತ್ತೆ ಮಾದೇವಿ, ಮೈದುನರಾದ ವೀರಣ್ಣ ಹಾಗೂ ಯಲ್ಲಪ್ಪ ಮನೆಯಲ್ಲಿಯೇ ಶವಬಿಟ್ಟು ಪರಾರಿಯಾಗಿದ್ದಾರೆ.

ಈ ಕುರಿತು ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.